alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕರ್ವಾಚೌತ್ ಉಪವಾಸ ಮಾಡಿಲ್ಲವೆಂದು ದುಡುಕಿದ ಪತಿ

ಕರ್ವಾಚೌತ್ ಉಪವಾಸ ವೃತ ಮಾಡಿಲ್ಲ ಅನ್ನೋ ಕಾರಣಕ್ಕೆ ದೆಹಲಿಯಲ್ಲಿ ವ್ಯಕ್ತಿಯೊಬ್ಬ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ತಾನೂ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 32 ವರ್ಷದ ಜಸ್ವಿಂದರ್ ಸಿಂಗ್ ಮೃತಪಟ್ಟ ವ್ಯಕ್ತಿ.

ಜಸ್ವಿಂದರ್ ಹಾಗೂ ಪತ್ನಿ ರೋಹಿಣಿ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ರು. ಬೇರೆ ಬೇರೆಯಾಗಿ ವಾಸಿಸುತ್ತಿದ್ರು. ರೋಹಿಣಿಯ ಹೆತ್ತವರನ್ನು ಭೇಟಿಯಾಗುವ ನೆಪ ಮಾಡಿಕೊಂಡು ಜಸ್ವಿಂದರ್ ಬಂದಿದ್ದ. ನಿನ್ನೊಂದಿಗೆ ಸ್ವಲ್ಪ ಮಾತನಾಡುವುದಿದೆ ಎಂದು ಹೇಳಿ ರೋಹಿಣಿಯನ್ನು ಟೆರೆಸ್ ಮೇಲೆ ಕರೆದೊಯ್ದಿದ್ದ.

4 ವರ್ಷದ ಮಗಳು ಕೂಡ ಜೊತೆಗೆ ತೆರಳಿದ್ಲು. ಮಾತು ಮಾತಿನ ನಡುವೆ ರೋಹಿಣಿ ಕರ್ವಾಚೌತ್ ಉಪವಾಸ ಮಾಡಿಲ್ಲ ಅನ್ನೋದು ಜಸ್ವಿಂದರ್ ಗೆ ಗೊತ್ತಾಗಿದೆ. ಇದರಿಂದ ಕೆರಳಿದ ಆತ ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ನಂತರ ಅವಳಿಗೆ ಚಾಕುವಿನಿಂದ ಚುಚ್ಚಿ, ತಾನು ಟೆರೆಸ್ ಮೇಲಿಂದ ಕೆಳಕ್ಕೆ ಹಾರಿದ್ದಾನೆ.

4 ವರ್ಷದ ಮಗಳು ಈ ಘಟನೆಗೆ ಸಾಕ್ಷಿಯಾಗಿದ್ಲು. ಸದ್ಯ ರೋಹಿಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಜಸ್ವಿಂದರ್ ಮೃತಪಟ್ಟಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...