alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಲ್ಲೇ ಸೆಕ್ಸ್, ನಂತರ ನಡೀತು ಭಯಾನಕ ಕೃತ್ಯ….

ಇದು ಯಾವ ಟಿವಿ ಕ್ರೈಮ್ ಶೋಗೂ ಕಡಿಮೆ ಇಲ್ಲದಂತಹ ನೈಜ ಘಟನೆ. ನಡೆದಿರೋದು ರಾಜಧಾನಿ ದೆಹಲಿಯಲ್ಲಿ. ಕಾರಿನಲ್ಲೇ ಪ್ರೇಯಸಿ ಜೊತೆ ಸೆಕ್ಸ್ ನಡೆಸಿದ ವ್ಯಕ್ತಿಯೊಬ್ಬ ನಂತರ ಅವಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ನಗ್ನ ಮೃತದೇಹದೊಂದಿಗೆ ಅವಳ ಮನೆಗೆ ಬಂದು ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ನಡೆದಾಗ ತಾವಿಬ್ಬರೂ ಮದ್ಯ ಸೇವಿಸಿದ್ದೆವು ಅಂತಾ ಪೊಲೀಸರ ಬಳಿ ಹೇಳಿದ್ದಾನೆ. ಕೊಲೆಯಾದ ಮಹಿಳೆ ಫಾರ್ಮ್ ಹೌಸ್ ಮಾಲೀಕನ ಮಗಳು. ವಿಚ್ಛೇದಿತೆಯಾಗಿರೋ ಆಕೆ ತಿಂಗಳ ಹಿಂದಷ್ಟೆ ಗರ್ಭಪಾತ ಮಾಡಿಸಿಕೊಂಡಿದ್ದಳು.

ಮದುವೆಯಾಗೋಣ ಅಂತಾ ಶಹಬಾದ್ ಖಾನ್ ನನ್ನು ಒತ್ತಾಯಿಸುತ್ತಿದ್ದಳಂತೆ. 2002ರಲ್ಲಿ ಏರ್ಲೈನ್ ಅಧಿಕಾರಿ ಜೊತೆ ಅವಳ ಮದುವೆ ನೆರವೇರಿತ್ತು. ಆದ್ರೆ ಪತಿಗೆ ಅಕ್ರಮ ಸಂಬಂಧವಿರೋದು ಗೊತ್ತಾಗ್ತಿದ್ದಂತೆ ಆತನಿಂದ ವಿಚ್ಛೇದನ ಪಡೆದಿದ್ದಳು. ದಂಪತಿಗೆ 12 ವರ್ಷದ ಮಗನೂ ಇದ್ದಾನೆ.

ಹೆಲ್ತ್ ಕೇರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಆಕೆಗೆ ಅಲ್ಲಿ ಶಹಬಾದ್ ಖಾನ್ ನ ಪರಿಚಯವಾಗಿತ್ತು. ಆತನಿಂದ ಗರ್ಭಿಣಿಯೂ ಆಗಿದ್ದ ಮಹಿಳೆ, ಅವನ ಒತ್ತಾಯಕ್ಕೆ ಮಣಿದು ಗರ್ಭಪಾತ ಮಾಡಿಸಿಕೊಂಡಿದ್ದಳು. ತನ್ನನ್ನು ಮದುವೆಯಾಗುವಂತೆ ಶಹಬಾದ್ ನನ್ನು ಒತ್ತಾಯಿಸುತ್ತಿದ್ದಳಂತೆ.

ಒಮ್ಮೆ ಇಬ್ಬರೂ ಹೊರಹೋಗಿದ್ರು. ಜೊತೆಯಾಗಿ ಮದ್ಯ ಸೇವಿಸಿದ್ದಾರೆ. ಮದುವೆ ವಿಚಾರಕ್ಕೆ ಇಬ್ಬರ ಮಧ್ಯ ಜಗಳವಾಗಿದೆ. ನಂತರ ಮಹಿಳೆ ಜೊತೆ ಸೆಕ್ಸ್ ಮಾಡಿದ ಶಹಬಾದ್, ಅವಳನ್ನು ಹತ್ಯೆ ಮಾಡಿಬಿಟ್ಟಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...