alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆಯಲ್ಲಿ ಅಂತ್ಯವಾಯ್ತು ಇಸ್ಪೀಟ್ ಆಟ

ದೀಪಾವಳಿ ಹಬ್ಬದ ವೇಳೆ ಕಾರ್ಡ್ಸ್ ಆಡಲು ಕೂತಾಗ,‌ ಮಾತಿನ ಚಕಮಕಿ ನಡೆದು, ಜಗಳ‌ ವಿಕೋಪಕ್ಕೆ ತಿರುಗಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯಲ್ಲಿ ಗುರುವಾರ ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು 45 ವರ್ಷದ ಹರೀಶ್ ‌ಶರ್ಮಾ ಎಂದು ಗುರುತಿಸಲಾಗಿದೆ. ಹರೀಶ್ ಪತ್ನಿ ನೀಡಿರುವ ದೂರನ್ನು ಪರಿಗಣಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಹರೀಶ್ ಪತ್ನಿ ಸುನೀತಾ ಶರ್ಮಾ ಪ್ರಕಾರ, ಶರ್ಮಾನ ಕೊಲೆಗೆ ರಾಜು ಬಿಲ್ವಾರಿ ಎಂಬಾತ ಕಾರಣ ಎಂದಿದ್ದಾರೆ. ಬುಧವಾರ ದೀಪಾವಳಿ‌ ಹಬ್ಬದ ಹಿನ್ನಲೆಯಲ್ಲಿ ತನ್ನ ಸ್ನೇಹಿತ‌ ಬಿಲ್ವಾರಿ‌ ನಿವಾಸಕ್ಕೆ ಶರ್ಮಾ ಹೋಗಿ, ಕಾರ್ಡ್ಸ್ ಆಡಿದ್ದಾನೆ. ಆಟ ಜಗಳಕ್ಕೆ ತಿರುಗಿದಾಗ ಶರ್ಮಾ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ.

ಕೊಲೆಗೆ ಬಳಸಲಾದ ಬಂದೂಕನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿದ್ದು, ಪ್ರಮುಖ ಆರೋಪಿ ರಾಜು ಜೊತೆ ರಾಮ್, ರಾಜೇಶ್, ಜಿತೇಂದ್ರ ಕುಮಾರ್, ಹರಿಕಾಂತ್, ಕುಲ್ದೀಪ್‌ ಹಾಗೂ ರಮೇಶ್ ಕಪೂರ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪಶ್ಚಿಮ ವಲಯ ಡಿಸಿಪಿ ಮೋನಿಕಾ ಭಾರದ್ವಾಜ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...