alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ಸಾಧನೆಗಾಗಿ ಈತ ಮಾಡಿದ್ದಾನೆ ಅಪಾಯಕಾರಿ ಕೆಲಸ

yoga

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯಂತ ಅವಶ್ಯಕ ಅನ್ನೋದು ಸಾಬೀತಾಗಿದೆ. ಯೋಗಾಸನ ಈಗ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮಾರಕ ಖಾಯಿಲೆಗಳು ಕೂಡ ಗುಣವಾಗಿರುವ ಉದಾಹರಣೆಗಳು ಕೂಡ ಇವೆ.

ಯೋಗದಿಂದ ಏನು ಬೇಕಾದ್ರೂ ಮಾಡಬಹುದು ಎಂದುಕೊಂಡ ದೆಹಲಿಯ ಶೈಲೇಂದ್ರ ಸಿಂಗ್ ಕೂಡ ಅಪಾಯಕಾರಿ ಸಾಹಸ ಮಾಡಿದ್ದಾರೆ. ಪ್ರತಿನಿತ್ಯ ಯೋಗ ಕಸರತ್ತನ್ನು ಮಾಡುವ ಶೈಲೇಂದ್ರ ಸಿಂಗ್ ಗೆ ತಮ್ಮ ಡಯಟ್ ನಲ್ಲಿ ಲೋಹವನ್ನೂ ಸೇರ್ಪಡೆ ಮಾಡಬೇಕು ಎನಿಸಿತ್ತು. ಅದಕ್ಕಾಗಿ ಅವರು 2 ಲೋಹದ ಪ್ಲೇಟ್, ಟ್ಯೂಬ್ ಲೈಟ್, 6 ಸೂಜಿಗಳು ಮತ್ತು ಹಲವು ಬ್ಲೇಡ್ ಗಳನ್ನು ತಿಂದಿದ್ದಾರೆ.

ಶೈಲೇಂದ್ರ ಸಿಂಗ್ ಅವರಿಗೆ ಈಗ 52 ವರ್ಷ. ಹಲವು ವರ್ಷಗಳ ಹಿಂದೆಯೇ ಈ ವಸ್ತುಗಳನ್ನೆಲ್ಲ ಅವರು ಸ್ವಾಹಾ ಮಾಡಿದ್ದರು. ಇತ್ತೀಚೆಗೆ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು, ಹೊಟ್ಟೆಯಲ್ಲಿದ್ದ ಲೋಹದ ವಸ್ತುಗಳನ್ನು ನೋಡಿ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

9 ವರ್ಷಗಳ ಕಾಲ ಲೋಹದ ತಟ್ಟೆ, ಬ್ಲೇಡ್, ಸೂಜಿ, ಟ್ಯೂಬ್ ಲೈಟ್ ಎಲ್ಲವೂ ಶೈಲೇಂದ್ರ ಸಿಂಗ್ ರ ಹೊಟ್ಟೆಯಲ್ಲೇ ಇತ್ತು. ಶಸ್ತ್ರಚಿಕಿತ್ಸೆ ಮೂಲಕ ಅವನ್ನೆಲ್ಲ ಹೊರತೆಗೆಯಲಾಗಿದೆ. ಆಟೋಮೊಬೈಲ್ ಬಿಡಿ ಭಾಗಗಳ ಅಂಗಡಿ ಇಟ್ಟುಕೊಂಡಿರೋ ಶೈಲೇಂದ್ರ ಅವರಿಗೆ ಒಂದು ರೀತಿಯ ಮಾನಸಿಕ ಅಸ್ವಸ್ಥತೆಯೂ ಇದೆ ಅಂತಾ ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...