alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ಗರ್ ತಿಂದು ಆಸ್ಪತ್ರೆ ಸೇರಿದ ಈತ…!

ಪ್ಲಾಸ್ಟಿಕ್ ತುಂಡು ಸೇರಿದ್ದ ಬರ್ಗರ್ ಸೇವಿಸಿದ ವ್ಯಕ್ತಿ ಗಂಟಲು ಗಾಯದಿಂದ ಆಸ್ಪತ್ರೆಗೆ ಸೇರಿದ ಘಟನೆ ದೆಹಲಿಯಲ್ಲಿ ನಡೆದಿದೆ. ಇಲ್ಲಿನ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಜನಪ್ರಿಯ ಯುಎಸ್ ಫಾಸ್ಟ್ ಫುಡ್ ಸೆಂಟರ್ ಇದೆ. ಅಲ್ಲಿ ರಾಕೇಶ್ ಕುಮಾರ್ ಎಂಬುವರು ಚೀಸ್ ವೆಜ್ ಬರ್ಗರ್ ಖರೀದಿಸಿ, ತಿನ್ನುವಾಗ ಬಾಯಿಗೆ ಏನೋ ಗಟ್ಟಿ ವಸ್ತು ಸಿಕ್ಕಂತಾಗಿದೆ. ಗಂಟಲಲ್ಲಿ ನೋವು ಶುರುವಾಗಿದೆ. ಸ್ವಲ್ಪ ಸಮಯದಲ್ಲೇ ಅವರಿಗೆ ವಾಕರಿಕೆ ಶುರುವಾಗಿದೆ.

ತಕ್ಷಣವೇ ಕುಮಾರ್ ಫಾಸ್ಟ್ ಫುಡ್ ಮ್ಯಾನೇಜರ್ ಗೆ ತಿಳಿಸಿದ್ದಾರೆ. ಹಾಗೆಯೇ ಪೊಲೀಸರಿಗೂ ಹೇಳಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರಾಕೇಶ್ ಅವರನ್ನು ಲೇಡಿ ಹಾರ್ಡಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಪಾಸಣೆ ನಡೆಸಿದ ವೈದ್ಯರು ಬರ್ಗರ್ ನಲ್ಲಿದ್ದ ಪ್ಲಾಸ್ಟಿಕ್ ತುಂಡು ಗಂಟಲನ್ನು ಗಾಯಗೊಳಿಸಿದೆ ಎಂದು ತಿಳಿಸಿದ್ದಾರೆ. ನಂತರ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಮನೆಗೆ ಕಳಿಸಿದ್ದಾರೆ. ಪೊಲೀಸರು ಫಾಸ್ಟ್ ಫುಡ್ ಮ್ಯಾನೇಜರ್ ನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ಆತ ಹೊರಬಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...