alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಕೂಟರ್ ನಲ್ಲಿ ಬೆಚ್ಚಗೆ ಮುದುಡಿ ಕುಳಿತಿತ್ತು ಹೆಬ್ಬಾವು…!

ದೆಹಲಿಯಲ್ಲಿ ಮಳೆ ಸುರಿಯುತ್ತಿದೆ. ಪರಿಣಾಮ ಅರಣ್ಯವಾಸಿಗಳು ನಾಡಿನತ್ತ ಮುಖ ಮಾಡಿವೆ. ಇತ್ತೀಚೆಗೆ ದೆಹಲಿಯಲ್ಲಿ ಹೆಬ್ಬಾವು ಹಾಗೂ ಹಾವುಗಳು ಪತ್ತೆಯಾಗಿದ್ದವು. ಈಗ ಸ್ಕೂಟರ್ ಮೇಲೆ ಹೆಬ್ಬಾವು ಬೆಚ್ಚಗೆ ಮುದುಡಿಕೊಂಡು ಕುಳಿತಿದ್ದು ಕಂಡು ಬಂದಿದೆ.

ಸ್ಕೂಟರ್ ಮುಂಭಾಗದಲ್ಲಿ ಹೆಬ್ಬಾವು ಕುಳಿತ್ತಿದ್ದನ್ನು ಕಂಡು ಸ್ಕೂಟರ್ ಮಾಲೀಕ ಕಿರಣ್ ಕುಮಾರ್ ಕಂಗಾಲಾಗಿದ್ದಾರೆ. ದೆಹಲಿಯ ಹೊರ ವಲಯದ ನಗರದಲ್ಲಿ ಘಟನೆ ನಡೆದಿದ್ದು, ಕೆಲ ಕಾಲ ಸ್ಥಳೀಯರಲ್ಲಿ ಆತಂಕ ಮೂಡಿತ್ತು. ಕೂಗಳತೆಯ ದೂರದಲ್ಲೇ ಅರಣ್ಯ ಪ್ರದೇಶವಿದ್ದು, ಕಾಡು ತಪ್ಪಿ ಹೆಬ್ಬಾವು ನಾಡಿಗೆ ಬಂದಿದೆ.

ಈ ಹೆಬ್ಬಾವು ಕಂಡ ಬಳಿಕ ಸ್ಕೂಟರ್ ಮಾಲೀಕ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಎನ್.ಜಿ.ಓ. ಸಿಬ್ಬಂದಿ ಹೆಬ್ಬಾವು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಅಲ್ಲದೆ ಹೆಬ್ಬಾವನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಈ ಮೂಲಕ ಸ್ಥಳೀಯರಲ್ಲಿ ಮೂಡಿದ್ದ ಆತಂಕ ಕಡಿಮೆ ಆಗಿದೆ. ಭಾರತದಲ್ಲಿ ಕಂಡು ಬರುವ ಹೆಬ್ಬಾವುಗಳು ಅಷ್ಟು ವಿಷಕಾರಿ ಅಲ್ಲದೆ ಇದ್ದರೂ, ಭಯ ಹುಟ್ಟಿಸೋದಂತೂ ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...