alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರೆದುರಲ್ಲೇ ಮೈಮರೆತು ಹಸ್ತಮೈಥುನ

idio

ನವದೆಹಲಿ: ವಿಮಾನದಲ್ಲಿ ಪ್ರಯಾಣಿಕಳ ಎದುರಲ್ಲೇ ಕಾಮುಕನೊಬ್ಬ ಹಸ್ತಮೈಥುನ ಮಾಡಿಕೊಂಡ ಘಟನೆ ಇಂಡಿಗೊ ವಿಮಾನದಲ್ಲಿ ನಡೆದಿದೆ.

ಹೈದರಾಬಾದ್ ನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬಳು ಪ್ರಯಾಣ ಬೆಳೆಸಿದ್ದು, ಆಕೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ.

ಮಹಿಳೆ ಕುಳಿತಿರುವುದನ್ನು ಲೆಕ್ಕಿಸದೇ ಭಯ, ನಾಚಿಕೆ ಇಲ್ಲದೇ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಈತನ ವರ್ತನೆಯಿಂದ ಮಹಿಳೆ ಬೇರೆ ಸೀಟು ಕೇಳಿ ಪಡೆದಿದ್ದಾಳೆ.

ದೆಹಲಿಗೆ ತೆರಳಿದ ಬಳಿಕ ವಿಮಾನ ನಿಲ್ದಾಣದ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ  ದಾಖಲಿಸಿಕೊಂಡ ಪೊಲೀಸರು ದೆಹಲಿ ಮೂಲದ ಕಾಮುಕನನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...