alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗ್ತಿಲ್ಲ, ಸಂಬಳ ಹೆಚ್ಚಿಸಿ ಎನ್ನುತ್ತಿದ್ದಾರೆ ಕೇಜ್ರಿವಾಲ್ ಶಾಸಕರು

ದೆಹಲಿ ವಿಧಾನಸಭೆ ಶಾಸಕರ ಸಂಬಳ ಹೆಚ್ಚಿಸುವಂತೆ ಶಾಸಕರು ಒತ್ತಾಯ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷದ ಶಾಸಕ ರವಿ, ಸಂಬಳ ಹೆಚ್ಚಿಸುವ ವಿಷ್ಯವನ್ನು ಪ್ರಸ್ತಾಪಿಸಿದ್ರು. ದೆಹಲಿ ಶಾಸಕರ ಸಂಬಳ 12 ಸಾವಿರವಿದೆ. ಇದು 2 ಲಕ್ಷದಿಂದ 2.5 ಲಕ್ಷಕ್ಕೆ ಏರಿಕೆಯಾಗಬೇಕು ಎಂದು ರವಿ ಒತ್ತಾಯ ಮಾಡಿದ್ರು.

ಕಡಿಮೆ ಸಂಬಳದಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಮದುವೆಯಾದ ಶಾಸಕರಿಗೆ ಮಕ್ಕಳಿದ್ದು, ವೆಚ್ಚ ಹೆಚ್ಚುತ್ತಿದೆ. ಇನ್ನು ಮದುವೆಯಾಗದ ಶಾಸಕರಿಗೆ ಯಾವುದೇ ಸಂಬಂಧ ಬರ್ತಿಲ್ಲ. ಕಡಿಮೆ ಸಂಬಳ ಎನ್ನುವ ಕಾರಣಕ್ಕೆ ಯಾರೂ ಮದುವೆಯಾಗಲು ಮುಂದೆ ಬರ್ತಿಲ್ಲ ಎಂದು ರವಿ ಹೇಳಿದ್ದಾರೆ. ವಿಪಕ್ಷಗಳ ಶಾಸಕರು ಕೂಡ ಇದಕ್ಕೆ ಬೆಂಬಲ ನೀಡಬೇಕೆಂದು ರವಿ ಹೇಳಿದ್ದಾರೆ.

ರವಿ ಮಾತಿಗೆ ಬಿಜೆಪಿ ಶಾಸಕರು ಬೆಂಬಲ ಸೂಚಿಸಿದ್ದಾರೆ. ಸಂಬಳ ಕಡಿಮೆಯಿರುವ ಕಾರಣ ಮದುವೆಯಾಗ್ತಿಲ್ಲ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಇದನ್ನು ಗೃಹ ಸಚಿವರ ಮುಂದಿಡಬೇಕು ಎಂದಿದ್ದಾರೆ. ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾರೆ.

ಈ ವಿಷ್ಯಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿ. 6 ಸದಸ್ಯರ ಸಮಿತಿ ರಚಿಸಿ. ಅವ್ರು ಗೃಹ ಸಚಿವರ ಮುಂದೆ ಈ ವಿಷ್ಯವನ್ನು ಪ್ರಸ್ತಾಪಿಸಲಿ ಎಂದಿದ್ದಾರೆ. ಈ ಸಮಿತಿಯಲ್ಲಿ ಸಿಸೋಡಿಯಾ ಮುಖ್ಯಸ್ಥರಾಗಿರಲಿದ್ದಾರೆ. ಮತ್ತೆ ಮೂರು ಆಮ್ ಆದ್ಮಿ ಶಾಸಕರು ಹಾಗೂ 2 ಬಿಜೆಪಿ ಶಾಸಕರು ಕಮಿಟಿಯಲ್ಲಿರಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...