alex Certify
ಕನ್ನಡ ದುನಿಯಾ       Mobile App
       

Kannada Duniya

ಸಲಿಂಗಕಾಮ ಕುರಿತು ತೀರ್ಪಿಗೆ ಲಲಿತ್‌ ಅಶೋಕಾ ಹೋಟೆಲ್‌ನಲ್ಲಿ ಸಂಭ್ರಮಾಚರಣೆ

ಸಲಿಂಗಕಾಮ ಅಪರಾಧ ಅಲ್ಲ ಎಂಬ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸಂಭ್ರಮಾಚರಣೆ ಮೂಲಕ ಸ್ವಾಗತಿಸಲಾಗಿದೆ. ದೇಶಾದ್ಯಂತ ಅನೇಕ ಭಾಗಗಳಲ್ಲಿ ಸಲಿಂಗಕಾಮಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು, ಹಾಡು, ಡ್ಯಾನ್ಸ್‌ಗಳ ಮೂಲಕ ಸುಪ್ರೀಂ ಕೋರ್ಟ್‌ ಪಂಚ ಪೀಠದ ತೀರ್ಪನ್ನು ಸ್ವಾಗತಿಸಿದ್ದಾರೆ.

ದೆಹಲಿಯ ಲಲಿತ್‌ ಅಶೋಕದಲ್ಲಿ ಸಿಬ್ಬಂದಿಗಳಿಂದ ವಿಶೇಷ ಡ್ಯಾನ್ಸ್‌ ಏರ್ಪಡಿಸುವ ಮೂಲಕ ಸಂಭ್ರಮಾಚರಣೆ ನಡೆಸಲಾಗಿದೆ. ಭಾರತೀಯ ದಂಡ ಸಂಹಿತೆ 377ರ ಸಿಂಧುತ್ವವನ್ನು ಪ್ರಶ್ನಿಸಿ ಹಾಕಲಾಗಿದ್ದ ಅರ್ಜಿದಾರರ ಪೈಕಿ ಒಬ್ಬರಾಗಿರುವ ಲಲಿತ್‌ ಗ್ರೂಪ್ ಆಫ್‌ ಹೋಟೆಲ್ಸ್‌ನ ಕಾರ್ಯಕಾರಿ ನಿರ್ದೇಶಕ ಕೇಶವ್‌ ಸೂರಿ, ಇದು ಸಂಭ್ರಮಾಚರಣೆಯ ಸಮಯ. ಈ ವಿಷಯದಲ್ಲಿ ಹೋರಾಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನನಗಿಂತಲೂ ಹೆಚ್ಚು, ಧನ್ಯವಾದ ಸಮರ್ಪಿಸುವ ವರ್ಗ ಒಂದಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿದ್ದ ಪಂಚಪೀಠ, ಸಲಿಂಗಕಾಮ ಅಪರಾಧವಲ್ಲ ಎಂದು ಐತಿಹಾಸಿಕ ತೀರ್ಪು ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...