alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಕ್ಕೆ ಹಾರಲಿದ್ದಾರೆ ಈ ಶಿಕ್ಷಕರು, ಕಾರಣ ಏನು ಗೊತ್ತಾ…?

ದೆಹಲಿಯ ಶಿಕ್ಷಕರ ಕಾರ್ಯಕ್ಷಮತೆ ಹಚ್ಚಿಸುವ ನಿಟ್ಟಿನಲ್ಲಿ ಸಿಂಗಾಪುರದ ಅಕಾಡೆಮಿಯೊಂದಕ್ಕೆ ತರಬೇತಿಗಾಗಿ ಕಳುಹಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಮೊದಲು ಶಿಕ್ಷಕರ ಕಾರ್ಯವೈಖರಿಯನ್ನ ಸಾಣೆ ಹಿಡಿಯುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಅಂತ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

ಈಗಾಗ್ಲೇ 200 ಶಿಕ್ಷಕರು ಸಿಂಗಾಪುರ್ ನ ಅಕಾಡೆಮಿಯೊಂದರಲ್ಲಿ ತರಬೇತಿಯನ್ನ ಪೂರ್ಣಗೊಳಿಸಿ ವಾಪಸ್ಸಾಗಿದ್ದಾರೆ. ಈಗ ಹೆಚ್ಚುವರಿಯಾಗಿ 400 ಮಂದಿ ಶಿಕ್ಷಕರನ್ನ ಎರಡನೇ ಹಂತದಲ್ಲಿ ತರಬೇತಿಗಾಗಿ ಕಳುಹಿಸಲಾಗುತ್ತಿದೆ. ಈ ತರಬೇತಿಯಿಂದ ಶಿಕ್ಷಕರಿಗೂ ಅಂತಾರಾಷ್ಟ್ರೀಯ ಸ್ಥಾನಮಾನಗಳು ಲಭ್ಯವಾಗಲಿದೆ ಅಂತ ಸಿಸೋಡಿಯಾ ತಿಳಿಸಿದ್ದಾರೆ.

ಮಾರ್ಚ್ ನಲ್ಲಿ ಮಂಡನೆಯಾದ ದೆಹಲಿ ಸರ್ಕಾರದ 53 ಸಾವಿರ ಕೋಟಿ ಗಾತ್ರದ ಬಜೆಟ್ ನಲ್ಲಿ ಶಿಕ್ಷಣಕ್ಕಾಗಿ ಶೇಕಡಾ 26ರಷ್ಟು ಅನುದಾನವನ್ನು ಮೀಸಲಿಡಲಾಗಿದೆ. ಸತತ ಮೂರು ವರ್ಷಗಳಿಂದ ಶಿಕ್ಷಣಕ್ಕಾಗಿ ಶೇಕಡಾ 25ರಷ್ಟು ಅನುದಾನವನ್ನು ಮೀಸಲಿಡುತ್ತಿರುವ ಸರ್ಕಾರ ಎಂಬ ಹೆಗ್ಗಳಿಕೆಗೆ ದೆಹಲಿ ಸರ್ಕಾರ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...