alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಸ್ಥಳದಲ್ಲಿ ಸಿಗಲಿದೆ ಉಚಿತ ವೈಫೈ ಸೇವೆ

ಸಾರ್ವಜನಿಕ ಸ್ಥಳದಲ್ಲಿ ಉಚಿತ ವೈಫೈ ಸೇವೆ ನೀಡಲು ದೆಹಲಿ ಸರ್ಕಾರ ಮುಂದಾಗಿದೆ. ವೈಫೈ ಸೌಲಭ್ಯ ಒದಗಿಸಲು 11 ಸದಸ್ಯರ ವಿಶೇಷ ತಂಡವನ್ನು ರಚಿಸಲಾಗಿದೆ. ವೈಫೈ ಯೋಜನೆಯ ವಿಶೇಷ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಪಿಡಬ್ಲ್ಯೂಡಿ ವೈಫೈ ಯೋಜನೆಗಾಗಿ ವಿಶೇಷ ಸಮಿತಿಯನ್ನು ರಚಿಸಿದೆ.

ಸಮಿತಿ  ದೆಹಲಿ ಪೊಲೀಸ್, ಪಿಡಬ್ಲ್ಯೂಡಿ, ಗೃಹ ಮತ್ತು ಐಟಿ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ದೆಹಲಿ ಜನರಿಗೆ ಉಚಿತ ವೈಫೈ ಸೇವೆ ಒದಗಿಸುವುದು ದೆಹಲಿ ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ತಯಾರಿ ಜೋರಾಗಿ ಸಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಸೇವೆ ನೀಡುವುದು ಆಮ್ ಆದ್ಮಿ ಪಕ್ಷದ ಚುನಾವಣೆಯ ಪ್ರಮುಖ ಭರವಸೆಗಳಲ್ಲಿ ಒಂದು. 2016 ರಲ್ಲಿ ಪೈಲಟ್ ಯೋಜನೆಯನ್ನು ಶುರು ಮಾಡಿತ್ತು. ಆದ್ರೆ ಅದು ಯಶಸ್ವಿಯಾಗಿರಲಿಲ್ಲ. 2018-19 ರ ಬಜೆಟ್ ನಲ್ಲಿ ಉಚಿತ ವೈಫೈಗೆ ದೆಹಲಿ ಸರ್ಕಾರ 100 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...