alex Certify
ಕನ್ನಡ ದುನಿಯಾ       Mobile App
       

Kannada Duniya

ಗದರಿಸಿದ ತಂದೆ-ತಾಯಿಗೆ ಇಂಥ ಶಿಕ್ಷೆ ನೀಡಿದ ಇಂಜಿನಿಯರ್ ವಿದ್ಯಾರ್ಥಿ

ನೈಋತ್ಯ ದೆಹಲಿಯ ಕಿಶನ್ ಗಡ್ ನ ಮನೆಯೊಂದರಲ್ಲಿ ತಂದೆ-ತಾಯಿ ಹಾಗೂ ಮಗಳ ಶವ ಸಿಕ್ಕಿದೆ. ಪೊಲೀಸರು ಆರೋಪಿ ಮಗನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಚಾಕುವಿನಿಂದ ಇರಿದು ತಂದೆ-ತಾಯಿ ಹಾಗೂ ಸಹೋದರಿಯನ್ನು ಮಗ ಹತ್ಯೆ ಮಾಡಿದ್ದಾನೆ.

ಆರೋಪಿ ಸೂರಜ್, ಖಾಸಗಿ ಕಾಲೇಜೊಂದರಲ್ಲಿ ಸಿವಿಲ್ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಮೃತ ಮಗಳು ಖಾಸಗಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದಳಂತೆ. ಸೂರಜ್ ತಂದೆ ಮೃತ ಮಿಥಲೇಶ್ 18 ವರ್ಷಗಳಿಂದ ಇದೇ ಮನೆಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದನಂತೆ.

ಸೂರಜ್ ನಿಂದ ತಪ್ಪಿಸಿಕೊಳ್ಳಲು ತಾಯಿ ಕೂಗಿಕೊಂಡಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ಪಕ್ಕದವರು ಬರುವ ಮೊದಲೇ ಸೂರಜ್ ಕೆಲಸ ಮುಗಿಸಿದ್ದ. ನಂತ್ರ ಮನೆ ಮುಂದಿನ ಗೇಟ್ ಬಳಿ ಕುಳಿತು ಅಳುತ್ತಿದ್ದನಂತೆ. ಆತನ ಕೈನಲ್ಲಿದ್ದ ಚಾಕು ಹಾಗೂ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವುದೋ ಕಾರಣಕ್ಕೆ ಸಣ್ಣ ಗಲಾಟೆ ನಡೆದಿದೆ. ತಂದೆ-ತಾಯಿ ಬೈಗುಳಕ್ಕೆ ಬೇಸತ್ತು ಸೂರಜ್ ಈ ಕೃತ್ಯವೆಸಗಿದ್ದಾನೆಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...