alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರಾಟ ಮಾಡಿದ್ದ ದುಬಾರಿ ಕಾರನ್ನು ಕದ್ದು ತಂದ ಭೂಪ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ಎಂಜಿನಿಯರ್ ಒಬ್ಬ ತನ್ನ ಐಶಾರಾಮಿ ಆಡಿ ಕಾರನ್ನು 17.5 ಲಕ್ಷ ರೂ. ಗಳಿಗೆ ಮಾರಾಟ ಮಾಡಿದ್ದು, ಹಣ ಪಡೆದ ಬಳಿಕ ಅದನ್ನು ಕದ್ದು ತಂದು ಈಗ ಸಿಕ್ಕಿ ಬಿದ್ದಿದ್ದಾನೆ.

ಉತ್ತರಕಾಂಡ್ ಮೂಲದ ಮನೋಜ್ ಸಿಂಘಾಲ್ ಎಂಬಾತ ತನ್ನ ಕಾರು ಮಾರಾಟಕ್ಕಿದೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದ. ಇದನ್ನು ನೋಡಿ ಸರ್ಫರುಜುದ್ದೀನ್ ಎಂಬವರು ಮನೋಜ್ ನನ್ನ ಸಂಪರ್ಕಿಸಿದ್ದು, ಮುಂಗಡ ಹಣ 50 ಸಾವಿರ ರೂ. ನೀಡಿ ಕಾರು ತೆಗೆದುಕೊಂಡು ಹೋಗಿದ್ದರು.

ಬಳಿಕ 14 ಲಕ್ಷ ರೂಪಾಯಿಗಳನ್ನು ಆನ್ಲೈನ್ನಲ್ಲಿ ಮನೋಜ್ ಅಕೌಂಟ್ ಗೆ ವರ್ಗಾಯಿಸಿದ್ದು, ಉಳಿದ 3 ಲಕ್ಷ ರೂ. ಗಳನ್ನು ಕಾರನ್ನು ತಮ್ಮ ಹೆಸರಿಗೆ ವರ್ಗಾಯಿಸುವ ವೇಳೆ ನೀಡುವುದಾಗಿ ಹೇಳಿದ್ದರು.

ಮಾರ್ಚ್ 15ರಂದು ಸರ್ಫರುಜುದ್ದೀನ್ ರ ಈ ಕಾರು ಕಳವಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ವೇಳೆ ಕಾರಿನ ಮೂಲ ಮಾಲೀಕ ಮನೋಜ್ ಕಾರನ್ನು ಕಳವು ಮಾಡಿ ಉತ್ತರಕಾಂಡ್ ನಲ್ಲಿರುವ ತನ್ನ ಊರಿಗೆ ತೆಗೆದುಕೊಂಡು ಹೋಗಿದ್ದು ಪತ್ತೆಯಾಗಿದೆ. ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...