alex Certify
ಕನ್ನಡ ದುನಿಯಾ       Mobile App
       

Kannada Duniya

‘ಇಷ್ಟವಿಲ್ಲದ ಗಂಡನಿಗಿಂತ ತೃತೀಯ ಲಿಂಗಿ ಗೆಳೆಯನೇ ಮೇಲು’

ಮನೆಯವರು ಮಾಡಿದ ಮದುವೆ ಒಲ್ಲದ ಮಹಿಳೆ ತನ್ನ ತೃತೀಯ ಲಿಂಗಿ ಗೆಳೆಯನ ಜೊತೆಗೇ ಬದುಕಲು ನಿರ್ಧರಿಸಿದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಆಕೆಯ ಪರವಾಗಿಯೇ ಕೋರ್ಟ್ ತನ್ನ ನಿಲುವು ವ್ಯಕ್ತಪಡಿಸಿದೆ.

ದೆಹಲಿಯ ಮಹಿಳೆಯೊಬ್ಬಳಿಗೆ ಮನೆಯವರು ಮಾಡಿದ ಮದುವೆ ಇಷ್ಟ ಇರದಿದ್ದರಿಂದ ಪತಿಯನ್ನು ತೊರೆದು ತನ್ನ ತೃತೀಯ ಲಿಂಗಿ ಗೆಳೆಯನ ಜೊತೆ ಬಾಳುತ್ತಿದ್ದಳು. ಇದರಿಂದ ಸಿಟ್ಟಾದ ಆಕೆಯ ಪಾಲಕರು ನ. 6 ರಂದು ಅವಳನ್ನು ಗೆಳೆಯನ ಮನೆಯಿಂದ ಅವನಿಲ್ಲದ ವೇಳೆ ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದಿದ್ದರು. ಇದರಿಂದ ಆತಂಕಗೊಂಡ ತೃತೀಯ ಲಿಂಗಿ, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ.

ದೆಹಲಿಯ ಹೈಕೋರ್ಟ್‍ನ ವಿಭಾಗೀಯ ಪೀಠದಲ್ಲಿ ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಮೃದುಲ್, ಸಂಗೀತ ಧಿಂಗ್ರಾ ಸೆಹಗಲ್ ಅವರಿದ್ದ ಪೀಠ, ಇದರಲ್ಲಿ ಪಾಲಕರು, ಪೊಲೀಸರು ಹಾಗೂ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಯಾರು ಬೇಕು ಎಂಬುದನ್ನು ಆಕೆಯೇ ನಿರ್ಧರಿಸಲಿ ಎನ್ನುವ ಮೂಲಕ ತೃತೀಯ ಲಿಂಗಿ ಗೆಳೆಯನೊಂದಿಗೆ ಬಾಳ್ವೆ ನಡೆಸಲು ಅನುಮತಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...