alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ಪೊಲೀಸ್ರು ಮಾಡಿದ್ದಾರೆ ಈ ಕೆಲ್ಸ

delhi-policeರಾಜಧಾನಿ ನವದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಮೊಬೈಲ್ ಫೋನ್ ಗಳ ಕಳ್ಳತನ ಅವ್ಯಾಹತವಾಗಿ ನಡೆದಿದೆ.

ಬ್ರಿಯೋ ಕಾರಿನಲ್ಲಿ ಠಾಕೂಠೀಕಾಗಿ ಬರುವ ಯುವತಿಯೊಬ್ಬಳು ತನ್ನ ಮೊಬೈಲ್ ಬ್ಯಾಟರಿ ಖಾಲಿಯಾಗಿದ್ದು, ತುರ್ತಾಗಿ ಮಾತನಾಡಬೇಕೆಂದು ಹೇಳಿ ಫೋನ್ ಪಡೆದು ಕಣ್ಮುಚ್ಚಿ ಬಿಡುವಷ್ಟರಲ್ಲೇ ಪರಾರಿಯಾಗಿದ್ದಾಳೆ.

ವಿದ್ಯಾರ್ಥಿಗಳೇ ಈಕೆಯ ಟಾರ್ಗೆಟ್ ಆಗಿದ್ದು, ಹೀಗಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪೊಲೀಸರು ಅಂತಹದ್ದೇ ಕಾರ್ಯ ಮಾಡಿದ್ದಾರೆ.

ಗುರುವಾರದಂದು ಹೆಡ್ ಕಾನ್ ಸ್ಟೇಬಲ್ ವಿರೇಂದರ್ ಸಿಂಗ್ ಹಾಗೂ ಸಬ್ ಇನ್ಸ್ ಪೆಕ್ಟರ್ ಗುರುದೀಪ್ ಕೌರ್, ದೆಹಲಿ ವಿಶ್ವವಿದ್ಯಾನಿಲಯದ ಬಳಿ ಖಾಸಗಿ ವಾಹನದಲ್ಲಿ ಬಂದಿದ್ದಾರೆ. ಗುರುದೀಪ್ ಕೌರ್ ವಿದ್ಯಾರ್ಥಿನಿಯೊಬ್ಬಳ ಬಳಿ ತಮ್ಮ ಫೋನ್ ಬ್ಯಾಟರಿ ಖಾಲಿಯಾಗಿದೆ. ತುರ್ತಾಗಿ ಕರೆ ಮಾಡಬೇಕಿದೆ ಎಂದು ಆಕೆಯ ಫೋನ್ ಪಡೆದು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಬಳಿಕ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ ಸ್ಟೇಬಲ್ ನರೇಶ್ ಕುಮಾರ್, ತಮ್ಮ ಬೈಕ್ ನಲ್ಲಿ ಬೆನ್ನಟ್ಟಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಿಂದ ಕೆಳಗಿಳಿದ ಸಬ್ ಇನ್ಸ್ ಪೆಕ್ಟರ್ ಗುರುದೀಪ್ ಕೌರ್ ತಮ್ಮನ್ನು ಪರಿಚಯಿಸಿಕೊಂಡು, ಸುತ್ತಲೂ ಜಮಾಯಿಸಿದ್ದ ವಿದ್ಯಾರ್ಥಿಗಳಿಗೆ ಬುದ್ದಿ ಹೇಳಿದ್ದಾರೆ. ಪೊಲೀಸರು ಅಪರಿಚಿತರನ್ನು ನಂಬಿ ಮೋಸ ಹೋಗಬೇಡಿ ಎಂದು ಅಷ್ಟೆಲ್ಲಾ ಹೇಳಿದರೂ ಮಹಿಳೆಯೊಬ್ಬಳು ಫೋನ್ ಕೇಳಿದಾಕ್ಷಣ ಹಿಂದೆ ಮುಂದೆ ಯೋಚಿಸದೆ ಫೋನ್ ನೀಡುತ್ತೀರಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ತುರ್ತು ಸಂದರ್ಭದಲ್ಲಿ ಸಹಾಯ ಮಾಡಬೇಕು ನಿಜ. ಆದರೆ ಕಡೆ ಪಕ್ಷ ಒಂದು ಕ್ಷಣ ವಿಚಾರಿಸಿದರೂ ಸತ್ಯಾಂಶ ಗೊತ್ತಾಗುತ್ತದೆ. ಮಹಿಳೆ ತನ್ನ ಫೋನ್ ಬ್ಯಾಟರಿ ಖಾಲಿಯಾಗಿದೆ ಎಂದಾಗ ಅದನ್ನು ತೋರಿಸಲು ಕೇಳಿ. ಜೊತೆಗೆ ನಿಜಕ್ಕೂ ಅವರಿಗೆ ಫೋನ್ ಮಾಡುವ ತುರ್ತಿದೆ ಎಂದು ಅನಿಸಿದರೆ ಕಾರಿನಿಂದ ಕೆಳಗಿಳಿದ ಬಳಿಕ ಅಂತವರಿಗೆ ಫೋನ್ ನೀಡಿ ಎಂದು ತಿಳಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...