alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ ದೆಹಲಿ ಭಿಕ್ಷುಕರು

beggars

26 ವರ್ಷದ ರವಿ, 24 ವರ್ಷದ ಕದಮ್ ಇಬ್ರೂ ಹೊಟ್ಟೆಪಾಡಿಗಾಗಿ ದಕ್ಷಿಣ ದೆಹಲಿಯ ಸಫ್ದರ್ಗಂಜ್ ನಲ್ಲಿ ಭಿಕ್ಷೆ ಬೇಡುತ್ತಿದ್ರು. ಫ್ಲೈಓವರ್ ಮೇಲೆ, ಸಿಗ್ನಲ್ ಗಳಲ್ಲಿ ನಿಂತು ಕೈಚಾಚೋದೇ ಅವರ ಕೆಲಸ.

ಒಂದು ದಿನ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದ ಪೊಲೀಸರು ಮನೆಗೆ ನುಗ್ಗಿ ಹಣ, ಆಭರಣ ಕದ್ದಿದ್ದೀರಾ ಅಂತಾ ಎಳ್ಕೊಂಡು ಹೋದ್ರು. ಅವರಿಬ್ಬರ ಬಂಧನದ ಬೆನ್ನಲ್ಲೇ ಫುಟ್ ಪಾತ್ ಹಾಗೂ ಫ್ಲೈಓವರ್ ಕೆಳಗಡೆ ವಾಸವಿದ್ದ 500 ಕ್ಕೂ ಹೆಚ್ಚು ಭಿಕ್ಷುಕರನ್ನು ಠಾಣೆಗೆ ಕರೆಸಿ ಅವರ ಫೋಟೋ ಮತ್ತು ಬೆರಳಚ್ಚು ತೆಗೆದುಕೊಂಡಿದ್ದಾರೆ.

ಹೀಗೆ ಮಾಡೋದ್ರಿಂದ ಅವರಲ್ಲಿ ಯಾರಾದ್ರೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ರೆ ಪತ್ತೆ ಮಾಡೋದು ಸುಲಭ, ಇದೊಂದು ಎಚ್ಚರಿಕೆಯ ಕರೆಗಂಟೆ ಎನ್ನುತ್ತಾರೆ ಪೊಲೀಸರು. ಯಾವುದಾದರೂ ಭಿಕ್ಷುಕರು ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೂ ಸೂಚಿಸಲಾಗಿದೆ.

ಈ ಮೂಲಕ ರಾಷ್ಟ್ರರಾಜಧಾನಿಯಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕುವುದು ಪೊಲೀಸರ ಪ್ಲಾನ್. ಆದ್ರೆ ಯಾರೋ ಒಬ್ಬರು ಮಾಡಿದ ತಪ್ಪಿಗೆ ಎಲ್ಲಾ ಭಿಕ್ಷುಕರನ್ನು ದೂಷಿಸುವುದು, ಅನುಮಾನದಿಂದ ನೋಡುವುದು ಸರಿಯಲ್ಲ ಎನ್ನುತ್ತಾರೆ ಮಾನವ ಹಕ್ಕುಗಳ ಕಾರ್ಯಕರ್ತರು.

ಬಂಧಿತ ರವಿ ಹಾಗೂ ಕದಮ್ ಬಳಿ ಹೈಫೈ ಬ್ಯಾಗ್ ಇದ್ದಿದ್ದನ್ನು ನೋಡಿ ಪೊಲೀಸರಿಗೆ ಅನುಮಾನ ಬಂದಿತ್ತು. ಅವರಿಬ್ರೂ ರಾಜಸ್ತಾನ ಮೂಲದವರು, ಭಿಕ್ಷುಕರ ವೇಷದಲ್ಲಿ ಏರಿಯಾದಲ್ಲಿ ಸುತ್ತಾಡ್ತಾ ಶ್ರೀಮಂತರ ಮನೆ ಯಾವ್ಯಾವುದು ಅನ್ನೋದನ್ನು ಗಮನಿಸ್ತಾ ಇದ್ರು. ಅಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕದಿಯಲು ಸ್ಕೆಚ್ ಹಾಕ್ತಾ ಇದ್ರು ಅಂತಾ ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...