alex Certify
ಕನ್ನಡ ದುನಿಯಾ       Mobile App
       

Kannada Duniya

ಸಮನ್ಸ್ ನೀಡಲು ಹೋದ ವೇಳೆ ನಡೆಯಿತು ನಾಟಕೀಯ ಬೆಳವಣಿಗೆ

ttv-dinakaran_650x400ಎಐಎಡಿಎಂಕೆ ಯ ‘ಎರಡು ಎಲೆ’ ಚಿಹ್ನೆ ಪಡೆಯಲು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮಧ್ಯವರ್ತಿಯೊಬ್ಬನ ಮೂಲಕ ಕೋಟ್ಯಾಂತರ ರೂ. ಲಂಚ ನೀಡಲು ಮುಂದಾಗಿದ್ದರೆಂಬ ಆರೋಪ ಹೊತ್ತಿರುವ ಟಿಟಿವಿ ದಿನಕರನ್ ಗೆ ದೆಹಲಿ ಪೊಲೀಸರು ಮಧ್ಯ ರಾತ್ರಿ ಸಮನ್ಸ್ ನೀಡಲು ಚೆನ್ನೈನ ಅವರ ನಿವಾಸಕ್ಕೆ ತೆರಳಿದ್ದ ವೇಳೆ ನಾಟಕೀಯ ಬೆಳವಣಿಗೆ ನಡೆದಿದೆ.

ದಿನಕರನ್ ನಿವಾಸದಲ್ಲಿದ್ದ ಸುಮಾರು 20 ಕ್ಕೂ ಅಧಿಕ ಬೆಂಬಲಿಗರು ದೆಹಲಿ ಪೊಲೀಸರ ವಿರುದ್ದ ಘೋಷಣೆ ಕೂಗಿದ್ದಾರಲ್ಲದೇ ರವಿಚಂದ್ರನ್ ಎಂಬ ದಿವಾಕರನ್ ಅಭಿಮಾನಿ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಟಿಟಿವಿ ದಿನಕರನ್ ಗೆ ಸಮನ್ಸ್ ಜಾರಿ ಮಾಡಿದ್ದಾರೆ.

ದಿನಕರನ್ ವಿದೇಶಕ್ಕೆ ಪರಾರಿಯಾಗುವ ಶಂಕೆಯ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಲುಕ್ ಔಟ್ ನೋಟೀಸ್ ಕೂಡಾ ಜಾರಿಗೊಳಿಸಿದ್ದು, ಇದಕ್ಕೆ ಟಿಟಿವಿ ದಿನಕರನ್ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 20 ವರ್ಷಗಳಿಂದ ತಮ್ಮ ಪಾಸ್ ಪೋರ್ಟ್ ನ್ಯಾಯಾಲಯದಲ್ಲಿದ್ದು, ತಾವು ವಿದೇಶಕ್ಕೆ ಪರಾರಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದ ಸುಕೇಶ್ ಚಂದ್ರಶೇಖರ್ ಎಂಬಾತನನ್ನು ಕೆಲ ದಿನಗಳ ಹಿಂದೆ ಬಂಧಿಸಿದ್ದ ದೆಹಲಿ ಪೊಲೀಸರು ಆತನಿಂದ 1 ಕೋಟಿ ರೂ. ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಆತ, ತಾನು ಟಿಟಿವಿ ದಿನಕರನ್ ಸೂಚನೆ ಮೇರೆಗೆ ಎಐಎಡಿಎಂಕೆ ಪಕ್ಷದ ಚಿಹ್ನೆ ‘ಎರಡು ಎಲೆ’ ಯನ್ನು ಪಡೆಯಲು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಮುಂದಾಗಿದ್ದಾಗಿ ಒಪ್ಪಿಕೊಂಡಿದ್ದ. ಈ ಹಿನ್ನಲೆಯಲ್ಲಿ ಟಿಟಿವಿ ದಿನಕರನ್ ಗೆ ದೆಹಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...