alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಹೋಟೆಲ್ ನಲ್ಲಿದ್ರು 39 ಹುಡುಗಿಯರು

ದೆಹಲಿ ಮಹಿಳಾ ಆಯೋಗದ ನೇತೃತ್ವದಲ್ಲಿ ಪಹಾಡಗಂಜ್ ಹೋಟೆಲ್ ಒಂದರಲ್ಲಿ ಬಂಧಿಯಾಗಿದ್ದ 39 ಹುಡುಗಿಯರನ್ನು ರಕ್ಷಿಸಲಾಗಿದೆ. ಹುಡುಗಿಯರೆಲ್ಲ ನೇಪಾಳದವರು ಎನ್ನಲಾಗಿದೆ. ದೇಶದಿಂದ ಹೊರಗೆ ಕಳುಹಿಸಲು ತಯಾರಿ ನಡೆದಿತ್ತು. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಪೊಲೀಸ್ ಜೊತೆ ಸೇರಿ ರಾತ್ರಿ ಒಂದು ಗಂಟೆ ಸುಮಾರಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ವಾರದಲ್ಲಿ ನಡೆಯುತ್ತಿರುವ ಮೂರನೇ ಘಟನೆ ಇದಾಗಿದೆ.

ಕಳೆದ 15 ದಿನಗಳಿಂದ ಹುಡುಗಿಯರು ಹೋಟೆಲ್ ನಲ್ಲಿ ವಾಸವಾಗಿದ್ದರಂತೆ. ಎಲ್ಲರೂ ನೇಪಾಳದ ಪಾಸ್ಪೋರ್ಟ್ ತೋರಿಸಿದ್ದರಂತೆ. ಹೋಟೆಲ್ ಗೆ ಬಂದು ಹೋಗಿ ಮಾಡ್ತಿದ್ದರು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹುಡುಗಿಯರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲಾಗಿತ್ತು. ಅವ್ರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಮಹಿಳಾ ಆಯೋಗ ದೂರಿದೆ. ಈ ಹಿನ್ನೆಲೆಯಲ್ಲಿ ಹುಡುಗಿಯರಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ.

ಕಳೆದ ಐದು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ 73 ಹುಡುಗಿಯರನ್ನು ರಕ್ಷಿಸಲಾಗಿದೆ. ಎಲ್ಲ ಹುಡುಗಿಯರನ್ನು ಗಲ್ಫ್ ಗೆ ಕಳುಹಿಸುವ ಯತ್ನ ನಡೆದಿತ್ತು ಎಂದು ಸ್ವಾತಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...