alex Certify
ಕನ್ನಡ ದುನಿಯಾ       Mobile App
       

Kannada Duniya

10 ದಿನ ಯಾರ ಸಂಪರ್ಕಕ್ಕೂ ಸಿಗಲ್ಲ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹತ್ತು ದಿನಗಳವರೆಗೆ ವಿಪಾಸನಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದ್ರೆ ಮೌನಿಯಾಗಿರಲಿದ್ದಾರೆ. ಈ ಸಮಯದಲ್ಲಿ ಕೇಜ್ರಿವಾಲ್ ಯಾವುದೇ ಪತ್ರಿಕೆ, ಪುಸ್ತಕವನ್ನು ಓದೋದಿಲ್ಲ. ಕೇವಲ ಧ್ಯಾನದಲ್ಲಿ ಮಗ್ನರಾಗಿರಲಿದ್ದಾರೆ.

ವಿಪಾಸನಾದಲ್ಲಿ ಸುಮಾರು 10 ದಿನಗಳ ಕಾಲ ಕುಳಿತು ಧ್ಯಾನ ಮಾಡಬೇಕಾಗುತ್ತದೆ. ಈ ದಿನದಲ್ಲಿ ಹೊರಗಿನ ಪ್ರಪಂಚದ ನಡುವೆ ಯಾವುದೇ ಸಂಪರ್ಕವಿರುವುದಿಲ್ಲ. ಫೋನ್ ನಲ್ಲಿ ಕೂಡ ಮಾತನಾಡುವಂತಿಲ್ಲ. ಟ್ವೀಟರ್ ನೋಡುವಂತಿಲ್ಲ. ತಮ್ಮನ್ನು ತಾವು ಅರಿತುಕೊಳ್ಳುವ ಪ್ರಯತ್ನ ಇದಾಗಿದೆ. ಉಪಾಸನಾದಲ್ಲಿ ಪಾಲ್ಗೊಳ್ಳಲು ಕೇಜ್ರಿವಾಲ್ ಮಹಾರಾಷ್ಟ್ರಕ್ಕೆ ಹೋಗಲಿದ್ದಾರೆ. ಸೆಪ್ಟೆಂಬರ್ 10-20 ರವರೆಗೆ ದೆಹಲಿ ಬಿಟ್ಟು ಕೇಜ್ರಿವಾಲ್ ಮಹಾರಾಷ್ಟ್ರದಲ್ಲಿರಲಿದ್ದಾರೆ.

ಸದ್ಯದಲ್ಲಿಯೇ ಗುಜರಾತ್ ಚುನಾವಣೆ ಬರ್ತಾ ಇದೆ. ಇದಕ್ಕಾಗಿ ಎಲ್ಲ ಪಕ್ಷಗಳೂ ಭರ್ಜರಿ ತಯಾರಿ ನಡೆಸ್ತಿವೆ. ಶಿಬಿರ ಮುಗಿಸಿ ಬರುವ ಕೇಜ್ರಿವಾಲ್ ಶಾಂತಿಯಿಂದ ಚುನಾವಣೆ ಎದುರಿಸ್ತಾರಾ ಇಲ್ಲ ಮತ್ತೆ ಒತ್ತಡಕ್ಕೊಳಗಾಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...