alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರನ್ನು ಯಾಮಾರಿಸಲು ಈತ ಮಾಡಿದ್ದೇನು..?

500ಕ್ಕೂ ಹೆಚ್ಚು ಕಾರುಗಳನ್ನು ಕಳವು ಮಾಡಿದ್ದ ಖತರ್ನಾಕ್ ಕಳ್ಳನೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಪೊಲೀಸರನ್ನು ಯಾಮಾರಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ತಾ ಇದ್ದ. ಕುಣಾಲ್ ಅಲಿಯಾಸ್ ತನುಜ್ ನದ್ದು ಕಾರು ಕದಿಯೋದೇ ಕಾಯಕವಾಗಿತ್ತು.

ಇರ್ಷಾದ್ ಹಾಗೂ ಮೊಹಮದ್ ಶದಾಬ್ ಎಂಬುವವರು ಇವರಿಗೆ ಸಾಥ್ ನೀಡುತ್ತಿದ್ರು. 1997ರಲ್ಲಿ ಕುಣಾಲ್ ಸಣ್ಣ ಪುಟ್ಟ ಕಳ್ಳತನದೊಂದಿಗೆ ದಂಧೆ ಶುರುಮಾಡಿದ್ದ. ಮನೆಗಳವು ಮಾಡ್ತಿದ್ದ. ನಂತರ ಸೂಪರ್ ಚೋರನಾಗಿ ಬದಲಾಗಿದ್ದಾನೆ. ದುಬಾರಿ ಕಾರುಗಳನ್ನು ಕದಿಯುತ್ತಿದ್ದ.

ಅದನ್ನು ಮಾರಿ ಬಂದ ಹಣದಲ್ಲಿ ಐಷಾರಾಮಿ ಬದುಕು ನಡೆಸ್ತಿದ್ದ. ಡ್ರಗ್ಸ್ ಚಟಕ್ಕೂ ದಾಸನಾಗಿದ್ದ ಕುಣಾಲ್ ಗೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಕಲೆ ಕರಗತವಾಗಿತ್ತು. ಈತನ ಅಸಲಿ ಹೆಸರು ತನುಜ್. 2012ರಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಹೆಸರನ್ನು ಕುಣಾಲ್ ಅಂತಾ ಬದಲಾಯಿಸಿಕೊಂಡು, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡುಬಿಟ್ಟಿದ್ದ.

ಹಿಂದೊಮ್ಮೆ ಅರೆಸ್ಟ್ ಆಗಿದ್ದ ಕುಣಾಲ್, ಲಾಕಪ್ ನಲ್ಲೇ ಆತ್ಮಹತ್ಯೆಗೂ ಯತ್ನಿಸಿ ತಪ್ಪಿಸಿಕೊಂಡಿದ್ದ. ನಂತರ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ರಿಂದ ಪೊಲೀಸರಿಗೆ ಅವನ ಬಗ್ಗೆ ಸುಳಿವೇ ಸಿಕ್ಕಿರಲಿಲ್ಲ. ಅಕ್ಟೋಬರ್ 13ರಂದು ದೆಹಲಿಯ ಹೋಟೆಲ್ ಒಂದರ ಮುಂದೆ ಕಾರು ಕದಿಯಲು ಸ್ಕೆಚ್ ಹಾಕಿದ್ದ ಈತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ನಂತರ ತಾನೇ ತನುಜ್ ಅನ್ನೋ ಸತ್ಯವನ್ನು ಈತ ಬಾಯ್ಬಿಟ್ಟಿದ್ದಾನೆ. ಅಚ್ಚರಿ ಅಂದ್ರೆ ಫೆಬ್ರವರಿಯಿಂದೀಚೆಗೆ ಕುಣಾಲ್ ದೆಹಲಿಯಲ್ಲೇ 100ಕ್ಕೂ ಹೆಚ್ಚು ಕಾರುಗಳನ್ನು ಕದ್ದಿದ್ದಾನಂತೆ. ಈಗಾಗ್ಲೇ ಇವನ ಬಳಿಯಿಂದ 12 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...