alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವು-ಬದುಕಿನ ಮಧ್ಯೆ ಹುಡುಗ ಹೋರಾಡ್ತಿದ್ದರೆ ವಿಡಿಯೋ ಮಾಡ್ತಿದ್ರು ಜನ

ದೆಹಲಿಯ ಮುಖರ್ಜಿ ನಗರದಲ್ಲಿ ಬುಧವಾರ ಬಸ್ ಒಂದು ಹುಡುಗನ ಮೇಲೆ ಹರಿದಿದೆ. ಆಸ್ಪತ್ರೆಗೆ ಹೋಗುವ ಮೊದಲೇ ಹುಡುಗ ಸಾವನ್ನಪ್ಪಿದ್ದಾನೆ. ಬೈಕ್ ಓಡಿಸುತ್ತಿದ್ದ ಹುಡುಗನ ಮೇಲೆ ಖಾಸಗಿ ಬಸ್ ಹರಿದಿದೆ. ಬಸ್ ಅಡಿಯಾದ ಹುಡುಗ ಕೆಲ ಸಮಯ ಸಾವು-ಬದುಕಿನ ಮಧ್ಯೆ ಹೋರಾಡಿದ್ದಾನೆ. ಆದ್ರೆ ಅಲ್ಲಿದ್ದವರು ಯಾರೂ ನೆರವಿಗೆ ಬರಲಿಲ್ಲ. ಮೊಬೈಲ್ ತೆಗೆದು ವಿಡಿಯೋ ಮಾಡ್ತಿದ್ದರೇ ಹೊರತೂ ನೆರವು ನೀಡಲಿಲ್ಲ ಎಂದು ಮೂಲಗಳು ಹೇಳಿವೆ.

ಹುಡುಗನ ತಲೆಯಿಂದ ರಕ್ತ ಸೋರುತ್ತಿತ್ತು ಎನ್ನಲಾಗಿದೆ. ಆಸ್ಪತ್ರೆಗೆ ಕರೆದೊಯ್ಯಲು ತಡವಾಗಿದೆ. ಇದ್ರಿಂದಾಗಿ ಹುಡುಗ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಮೃತ ಯಶ್ ಹೆಲ್ಮೆಟ್ ಧರಿಸಿರಲಿಲ್ಲ. ಆತನ ತಲೆಗೆ ಗಂಭೀರ ಗಾಯವಾಗಲು ಇದೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಮಾರುಕಟ್ಟೆಗೆ ತರಕಾರಿ ತರಲು ಹೋದ ಹುಡುಗನ ಮೇಲೆ ಬಸ್ ಹರಿದಿದೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಶ್ ಘಟನೆ ನಡೆದ ದಿನ ಸ್ಕೂಲಿಗೆ ಹೋಗಿರಲಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...