alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಅತಿ ಶ್ರೀಮಂತ ರಾಜ್ಯಗಳು ಯಾವುವು ಗೊತ್ತಾ?

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲೊಂದು. ಇಲ್ಲಿ ಶ್ರೀಮಂತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದ ಅತ್ಯಂತ ಶ್ರೀಮಂತ ರಾಜ್ಯಗಳೆಂದ್ರೆ ದೆಹಲಿ ಮತ್ತು ಪಂಜಾಬ್. ನಮ್ಮ ದೇಶದಲ್ಲಿರೋ ಸಿರಿವಂತ ಸಮುದಾಯ ಅಂದ್ರೆ ಜೈನ ಸಮುದಾಯ. ಸಮೀಕ್ಷೆಯೊಂದರಲ್ಲಿ ಈ ಅಂಶಗಳು ಬಹಿರಂಗವಾಗಿವೆ. ನ್ಯಾಶನಲ್ ಫ್ಯಾಮಿಲಿ & ಹೆಲ್ತ್ ಸರ್ವೆ ಈ ಬಗ್ಗೆ ಸಮೀಕ್ಷೆ ನಡೆಸಿದೆ.

2015-16ರಲ್ಲಿ ಸುಮಾರು  ಲಕ್ಷ ಮನೆಗಳಲ್ಲಿ ಸಮೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಕುಟುಂಬಗಳು ಹೊಂದಿರುವ  ವಾಹನಗಳು ಅದರಲ್ಲೂ ಸೈಕಲ್, ಬೈಕ್, ಟಿವಿ, ಕುಡಿಯುವ ನೀರು ಸೇರಿದಂತೆ ಇತರ ಮೂಲ ಸೌಕರ್ಯಗಳನ್ನೆಲ್ಲ ಪರಿಗಣಿಸಿ ಸಮೀಕ್ಷೆ ಈ ನಿರ್ಧಾರಕ್ಕೆ ಬಂದಿದೆ.

ಜನಸಂಖ್ಯೆ, ಧಾರ್ಮಿಕ ಮತ್ತು ಜಾತಿ ಆಧಾರಿತ ಗುಂಪುಗಳ, ನಗರ-ಗ್ರಾಮೀಣ ಪ್ರದೇಶ ಹೀಗೆ ಐದು ವಿಭಾಗಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ಹೆಚ್ಚಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಶೇ.29ರಷ್ಟು ಬಡವರಿದ್ದಾರೆ. ನಗರಗಳಲ್ಲಿ ಬಡವರ ಸಂಖ್ಯೆ ಕೇವಲ ಶೇ.3.3ರಷ್ಟಿದೆ. ದೆಹಲಿ ಮತ್ತು ಪಂಜಾಬ್ ನಲ್ಲಿ ಶೇ.60ರಷ್ಟು ಮಂದಿ ಶ್ರೀಮಂತರ ವಿಭಾಗಕ್ಕೆ ಸೇರಿದ್ದಾರೆ. ಬಿಹಾರ ಅತ್ಯಂತ ಬಡ ರಾಜ್ಯ ಎನಿಸಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...