alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯಲ್ಲಿ ಡೀಸೆಲ್ ಜನರೇಟರ್ ಗೆ ನಿಷೇಧ, ತುಟ್ಟಿಯಾಗಲಿದೆ ಪಾರ್ಕಿಂಗ್

ದೆಹಲಿಯಲ್ಲಿ ವಾಯು ಮಾಲಿನ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ವಾಯು ಮಾಲಿನ್ಯದ ಪ್ರಮಾಣ ಈಗ ರೆಡ್ ಝೋನ್ ತಲುಪಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ದೆಹಲಿಯಲ್ಲಿ ಡೀಸೆಲ್ ಜನರೇಟರ್ ಗಳನ್ನು ನಿಷೇಧಿಸಿದೆ.

ಆಸ್ಪತ್ರೆಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಮಾತ್ರ ಡೀಸೆಲ್ ಜನರೇಟರ್ ಬಳಕೆಗೆ ಅವಕಾಶ ನೀಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಹನಗಳ ಭರಾಟೆ ಕೂಡ ಹೆಚ್ಚಾಗಿರುವುದರಿಂದ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಕೂಡ ಹೆಚ್ಚಳ ಮಾಡಲು ಚಿಂತನೆ ನಡೆದಿದೆ.

ದೀಪಾವಳಿ ಪಟಾಕಿ ಸಿಡಿಸುವ ಮುನ್ನವೇ ದೆಹಲಿಯಲ್ಲಿ ಗಾಳಿ ಸಂಪೂರ್ಣ ಮಲಿನವಾಗಿಬಿಟ್ಟಿದೆ. ಈಗ ಬೆಳಕಿನ ಹಬ್ಬದಲ್ಲಿ ಪಟಾಕಿ ಸಿಡಿಸಿದ್ರೆ ವಾಯು ಮಾಲಿನ್ಯ ಪ್ರಮಾಣ ಇನ್ನಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಸುಪ್ರೀಂ ಕೋರ್ಟ್ ಕೂಡ ಪಟಾಕಿ ಮಾರಾಟವನ್ನೇ ಬ್ಯಾನ್ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...