alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ: ಮುಂಜಾನೆ ‘ವಾಯುವಿಹಾರ’ಕ್ಕೆ ಸುರಕ್ಷಿತವಲ್ಲ ಈ ನಗರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ವಾಯು ಮಾಲಿನ್ಯ ಸಮಸ್ಯೆ ಉಲ್ಬಣಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮುಂಜಾನೆ ವೇಳೆ ವಾಕಿಂಗ್ ಮಾಡುವುದು ಸೂಕ್ತವಲ್ಲ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆ ಪ್ರಕಾರ, ಬುಧವಾರ ಮುಂಜಾನೆ ದೆಹಲಿಯಲ್ಲಿ ಭಾರಿ ಕೆಟ್ಟ ವಾತಾವರಣವಿದ್ದು, ಏರ್ ಕ್ವಾಲಿಟಿ ಇಂಡೆಕ್ಸ್ ಬೆಳಗ್ಗೆ 10 ರ ಸುಮಾರಿಗೆ 391 ದಾಖಲಾಗಿದ್ದು, ಹೆಚ್ಚು ವಾಯು ಮಾಲಿನ್ಯಕ್ಕಿಂತ ಕೇವಲ 10 ಅಂಕ ಕಡಿಮೆಯಿದೆ. ಆದ್ದರಿಂದ ಮುಂಜಾನೆ ವಾಕಿಂಗ್ ಸೂಕ್ತವಲ್ಲ ಎಂದು ತಜ್ಞರು ಹೇಳಿದ್ದಾರೆ.

ಇನ್ನು ಬುಧವಾರದಂದು ತಾಪಮಾನ 12.4 ಡಿಗ್ರಿಗೆ ಕುಸಿದಿದ್ದು, ಈ ಬಾರಿಯ ಸರಾಸರಿ ತಾಪಮಾನ 13.5 ಆಗಿತ್ತು. ಆದರೆ ಬುಧವಾರ ಏಕಾಏಕಿ ಒಂದು ಡಿಗ್ರಿ ಕುಸಿದಿದೆ. ಆದರೆ ರಾಷ್ಟ್ರ ರಾಜಧಾನಿಯ ತೇವಾಂಶ ಮಾತ್ರ 93ರಷ್ಟು ಇರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ದೆಹಲಿಯಲ್ಲಿ ಉತ್ಪತಿಯಾಗುತ್ತಿರುವ ವಾಯು ಮಾಲಿನ್ಯದ ಕಣಗಳು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಹವಾಮಾನ ಇಲಾಖೆ ಅಧಿಕಾರಿಯೊಬ್ಬರ ಪ್ರಕಾರ, ದೆಹಲಿಯ ವಾತಾವರಣ ಇದೇ ರೀತಿ ಮುಂದುವರಿಯಲಿದ್ದು, ಧೂಳು ಹಾಗೂ ಮಂಜಿನಿಂದ ರಸ್ತೆ ಕಾಣುವುದಿಲ್ಲ. ಆದರೆ ಮುಂಜಾನೆ ವೇಳೆ ಮೋಡಗಳು ಕಾಣಿಸುತ್ತಿಲ್ಲ.‌ ಮಧ್ಯಾಹ್ನದ ವೇಳೆ ಸ್ಪಲ್ಪ ಪ್ರಮಾಣದಲ್ಲಿ ಮೋಡಗಳು ಬರಲಿದೆ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...