alex Certify
ಕನ್ನಡ ದುನಿಯಾ       Mobile App
       

Kannada Duniya

ಗಗನಸಖಿ ಆತ್ಮಹತ್ಯೆಯ ಸುತ್ತ ಅನುಮಾನದ ಹುತ್ತ

ದೆಹಲಿಯ ಪಂಚ್​ ಶೀಲಾ ಪಾರ್ಕ್​​ನಲ್ಲಿ 32 ವರ್ಷದ ಗಗನಸಖಿ ಮನೆಯ ಮೇಲ್ಛಾವಣಿಯಿಂದ ಬಿದ್ದು ಸಾವನ್ನಪಿದ್ದಾರೆ. ಈ ನಿಗೂಢ ಸಾವಿನ ಬಗ್ಗೆ ಅನುಮಾನ ಮನೆ ಮಾಡಿದೆ.

ಅನೀಸಿಯಾ ಹಾಗೂ ಮಯಾಂಕ್​ರ ಮದುವೆ, ಎರಡು ವರ್ಷದ ಹಿಂದೆ ನಡೆದಿತ್ತು. ಮಯಾಂಕ್​​ಗೆ ಕುಡಿಯುವ ಚಟವಿದ್ದು, ಪತ್ನಿಗೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗುತ್ತಿತ್ತು.

ಈ ಸಂಬಂಧ ಅನೀಸಿಯಾ ತಂದೆ ಕಳೆದ ಕೆಲ ದಿನಗಳ ಹಿಂದೆ, ಮಗಳು ಪತಿ ಹಾಗೂ ಮಾವನ ವಿರುದ್ಧ ದೂರು ನೀಡಿದ್ದರು. ಮೃತಳ ಕುಟುಂಬಸ್ಥರು ತಿಳಿಸುವಂತೆ, ಅನೀಸಿಯಾ ತನಗೆ ಗಂಡನಿಂದ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ರು. ಮೃತಳ ಮನೆಯವರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಮೇಲ್ನೋಟಕ್ಕೆ ಇದು ಅನುಮಾನಾಸ್ಪದ ಸಾವು ಎಂದು ಕಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...