alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿ ಮೇಲಾದ ಲೈಂಗಿಕ ದೌರ್ಜನ್ಯಕ್ಕೆ ನೊಂದು ಯುವಕ ಆತ್ಮಹತ್ಯೆ..!

ಸಹೋದರಿಯ ಮೇಲಾದ ಲೈಂಗಿಕ ಕಿರುಕುಳದಿಂದ ನೊಂದು ದೆಹಲಿಯಲ್ಲಿ 18 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯ ಸಮಯ್ಪುರ ಬದ್ಲಿ ನಿವಾಸಿ ದೀಪಕ್, ನೇಣಿಗೆ ಕೊರಳೊಡ್ಡಿದ್ದಾನೆ. ಅದೇ ಏರಿಯಾದ ಪುರುಷರ ಗುಂಪೊಂದು ಆತನ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿತ್ತು ಎನ್ನಲಾಗ್ತಿದೆ.

ಇದ್ರಿಂದ ಕೆರಳಿದ್ದ ದೀಪಕ್, ಆ ಗುಂಪಿನ ಜೊತೆ ಜಗಳವಾಡಿದ್ದ. ಈ ವೇಳೆ ಅವರು ದೀಪಕ್ ವಿರುದ್ಧ ಕಳ್ಳತನದ ಆರೋಪ ಕೂಡ ಹೊರಿಸಿದ್ದರು. ಇದರಿಂದ ನೊಂದು ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಆತನ ತಾಯಿ ತಿಳಿಸಿದ್ದಾರೆ. ಡಿಸೆಂಬರ್ 7ರಂದು ದೀಪಕ್ ಮೃತದೇಹ ನೇಣಿಗೆ ಶರಣಾದ ಸ್ಥಿತಿಯಲ್ಲಿ ಮನೆಯಲ್ಲೇ ಪತ್ತೆಯಾಗಿದೆ.

ಸಹೋದರಿ ಮೇಲಾದ ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟಂತೆ ದೀಪಕ್ ಪೊಲೀಸರಿಗೆ ದೂರು ನೀಡಿರಲಿಲ್ಲ. ಯಾವುದೇ ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದು, ಶೀಘ್ರದಲ್ಲೇ ದೀಪಕ್ ಸಾವಿನ ರಹಸ್ಯ ಕೂಡ ಬಯಲಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...