alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯಲ್ಲಿ 131 ಮಲೇರಿಯಾ, 69 ಡೆಂಗ್ಯೂ ಪ್ರಕರಣ ಪತ್ತೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮಲೇರಿಯಾ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 131 ಕ್ಕೆ ಮುಟ್ಟಿದ್ದು, ಡೆಂಗ್ಯೂ ಪೀಡಿತರ ಸಂಖ್ಯೆ 69 ಆಗಿದೆ.

ಆಗಸ್ಟ್ 11 ರಿಂದ 20 ರವರೆಗೆ ಈ ಮಹಾಮಾರಿ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಜನವರಿಯಲ್ಲಿ 6, ಫೆಬ್ರವರಿಯಲ್ಲಿ 3, ಮಾರ್ಚ್ ನಲ್ಲಿ ಒಂದು, ಏಪ್ರಿಲ್ ನಲ್ಲಿ 2, ಮೇ ನಲ್ಲಿ 10, ಜೂನ್‍ ನಲ್ಲಿ 8 ಹಾಗೂ ಜುಲೈನಲ್ಲಿ 19 ರೋಗಿಗಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ.

ದಕ್ಷಿಣ ದೆಹಲಿ ಅಧಿಕಾರಿಗಳು ಈ ಅಂಕಿ ಅಂಶಗಳನ್ನು ಹೊರಡಿಸಿದ್ದಾರೆ. ಮಲೇರಿಯಾ ರೋಗಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ 2, ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ 1, ಮೇ ನಲ್ಲಿ 17, ಜೂನ್‍ ನಲ್ಲಿ 25, ಜುಲೈನಲ್ಲಿ 42 ರೋಗಿಗಳಲ್ಲಿ ಈ ಲಕ್ಷಣಗಳು ಕಂಡು ಬಂದಿವೆ.

ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ವೈದ್ಯರು ಮುಂದಾಗಿದ್ದಾರೆ. ಮನೆಯ ಸುತ್ತ ನೀರನ್ನು ನಿಂತುಕೊಳ್ಳದಂತೆ ನೋಡಿಕೊಳ್ಳಿ. ನೀರಿನ ಬಳಕೆಯ ಬಗ್ಗೆ ಎಚ್ಚರವಿರಲಿ. ಕಲುಷಿತ ನೀರು ಹಾಗೂ ನಿಂತ ನೀರಿನಲ್ಲಿ ಡೆಂಗ್ಯೂ ಸೊಳ್ಳೆಗಳು ಹುಟ್ಟೋದ್ರಿಂದ ನೀರನ್ನು ನಿಲ್ಲದಂತೆ ತಡೆಯಿರಿ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...