alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಕೂಲ್ ಆಗಿ ಬದಲಾಯ್ತು ಪೊಲೀಸ್ ಠಾಣೆ

ಸಾಮಾನ್ಯವಾಗಿ ಪೊಲೀಸ್ ಸ್ಟೇಷನ್ ಅಂದ್ರೆ ಕಳ್ಳಕಾಕರು ತುಂಬಿರುವ ಜಾಗ ಅನ್ನೋ ಅಭಿಪ್ರಾಯ ಎಲ್ಲರಿಗೂ ಇದೆ. ಆದ್ರೆ ಡೆಹ್ರಾಡೂನ್ ನ ಪ್ರೇಮ್ ನಗರ್ನಲ್ಲಿರುವ ಪೊಲೀಸ್ ಠಾಣೆ ಹಾಗಲ್ಲ. ಇದು ದುಷ್ಟರನ್ನು ಶಿಕ್ಷಿಸುವ ಪೊಲೀಸ್ ಠಾಣೆಯೂ ಹೌದು, ಮಕ್ಕಳ ಪಾಲಿನ ಪಾಠಶಾಲೆಯೂ ಹೌದು. ಡೆಹ್ರಾಡೂನ್ ನ ಅನೇಕ ಕೊಳಚೆ ಪ್ರದೇಶದ ಮಕ್ಕಳಿಗೆ ಪ್ರೇಮ್ ನಗರ್ ಪೊಲೀಸ್ ಠಾಣೆಯೇ ಪಾಠಶಾಲೆಯಾಗಿದೆ.

ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರ ವರೆಗೆ 4ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಇಲ್ಲಿ ವಿದ್ಯಾಭ್ಯಾಸ ನಡೆಯುತ್ತಿದೆ. ವಿದ್ಯಾರ್ಥಿಗಳ ವಯೋಮಾನಕ್ಕೆ ಅವರ ಬುದ್ಧಿ ಶಕ್ತಿಯ ಆಧಾರದ ಮೇಲೆ ಪಾಠಗಳನ್ನ ಹೇಳಿಕೊಡಲಾಗ್ತಿದೆ. ಪೊಲೀಸರೇ ಇಲ್ಲಿ ಶಿಕ್ಷಕರ ಪಾತ್ರವನ್ನು ನಿಭಾಯಿಸ್ತಿದ್ದಾರೆ. ಸದ್ಯ ಈ ಶಾಲೆಯಲ್ಲಿ 51 ಮಂದಿ ವಿದ್ಯಾರ್ಥಿಗಳಿದ್ದಾರೆ. 2018ರ ಮಾರ್ಚ್ನಲ್ಲಿ ಶಾಲೆಯನ್ನು ಆರಂಭಿಸಿದಾಗ ಕೇವಲ 10 ಮಂದಿ ವಿದ್ಯಾರ್ಥಿಗಳು ಶಾಲೆಯಲ್ಲಿದ್ದರು.

ಪೊಲೀಸರ ಕಾರ್ಯಕ್ಕೆ ದಾನಿಗಳು ಮತ್ತು ಕೆಲ ಸ್ವಯಂ ಸೇವಕ ಟ್ರಸ್ಟ್ ನವರು ತಮ್ಮ ಕೈಲಾದ ಕೊಡುಗೆ ನೀಡುತ್ತಿದ್ದಾರೆ. ಕೆಲವರು ವಿದ್ಯಾರ್ಥಿಗಳನ್ನ ತಮ್ಮದೇ ವ್ಯಾನ್ನಲ್ಲಿ ಪಿಕ್ ಅಪ್ ಡ್ರಾಪ್ ಮಾಡಿದ್ರೆ, ಮತ್ತೆ ಕೆಲವರು ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಪಠ್ಯ ಪುಸ್ತಕಗಳನ್ನ ನೀಡುತ್ತಿದ್ದಾರೆ. ಕೆಲವರು ಮಕ್ಕಳಿಗೆ ಸಮೋಸಾ ಮತ್ತು ಬಾಳೆಹಣ್ಣು ನೀಡಿ ಮಕ್ಕಳ ಹಸಿವು ನೀಗಿಸುತ್ತಿದ್ದಾರೆ.

ಪ್ರೇಮ್ ನಗರದ ಟ್ರಾಫಿಕ್ ಜಂಕ್ಷನ್ ಒಂದರ ಸಮೀಪದಲ್ಲೇ ಇರುವ ಈ ಶಾಲೆಗೆ ಪ್ರತ್ಯೇಕ ಕಟ್ಟಡವಿಲ್ಲ. ಹಾಗಾಗಿ ಪೊಲೀಸರು ನೆರವಿನ ನಿರೀಕ್ಷೆಯಲ್ಲಿದ್ದಾರೆ. ದಿನಕ್ಕೆ ಮೂರು ಬ್ಯಾಚ್ಗಳಾಗಿ ವಿದ್ಯಾರ್ಥಿಗಳಿಗೆ ಪೊಲೀಸರೇ ಶಿಕ್ಷಕರಾಗಿ ಪಾಠ ಹೇಳ್ತಿದ್ದು ಶಿಕ್ಷಕರ ಅಗತ್ಯವಿದೆ. ಆದ್ರೂ ಪೊಲೀಸರ ಈ ಸಾಮಾಜಿಕ ಕಾರ್ಯ ಎಲ್ಲರ ಮೆಚ್ಚುಗೆಗೆ , ಪ್ರಶಂಸೆಗೆ ಪಾತ್ರವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...