alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರವಾಗಿದೆ ಈತ ವಿಚ್ಛೇದನಕ್ಕೆ ನೀಡಿದ ಕಾರಣ

de-high-c

ನವದೆಹಲಿ: ಗರ್ಭಿಣಿ ಪತ್ನಿ ಲೈಂಗಿಕ ಸುಖ ನೀಡುತ್ತಿಲ್ಲವಾದ್ದರಿಂದ, ತನಗೆ ವಿಚ್ಚೇದನ ಕೊಡಿಸಬೇಕೆಂದು ವ್ಯಕ್ತಿಯೊಬ್ಬ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾನೆ.

ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ, ಗರ್ಭಿಣಿ ತನ್ನ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಕಾರಣಕ್ಕೆ ವಿಚ್ಛೇದನ ನೀಡಲಾಗದು. ಗರ್ಭಿಣಿಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸುಲಭದ ಕೆಲಸವಲ್ಲ. ಹಾಗಾಗಿ, ಗರ್ಭಿಣಿ ಪತ್ನಿ ಲೈಂಗಿಕ ಸುಖ ನೀಡುತ್ತಿಲ್ಲ ಎಂದು ಅರ್ಜಿ ಸಲ್ಲಿಸುವಂತಿಲ್ಲ ಎಂದು ಹೇಳಿದೆ.

ಇಂತಹವುಗಳೆಲ್ಲಾ ವಿಚ್ಛೇದನ ಕೊಡಲು ಕಾರಣವಲ್ಲ. ಗರ್ಭಿಣಿಯರು ಲೈಂಗಿಕ ಚಟುವಟಿಕೆಗಳಿಂದ ದೂರ ಇದ್ದಾಗ, ಅದನ್ನು ಗಂಡನ ಪಾಲಿಗೆ ಕ್ರೌರ್ಯ ಎಂದು ಪರಿಗಣಿಸಲಾಗದು ಎಂದು ಲೈಂಗಿಕ ಸುಖ ನೀಡದ ಗರ್ಭಿಣಿ ಪತ್ನಿಗೆ ಡೈವೋರ್ಸ್ ಕೊಡಲು ಮುಂದಾದ ವ್ಯಕ್ತಿಗೆ ಕೋರ್ಟ್ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...