alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದ್‌ ವೇಳೆ ಅಂಗಡಿ ತೆರೆದವರ ಬಾಯಿಗೆ ‘ರಸಗುಲ್ಲಾ’

ರಾಷ್ಟ್ರಾದ್ಯಂತ ತೈಲ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್‌ ಕರೆ ನೀಡಿದ್ದ ‘ಭಾರತ್‌ ಬಂದ್‌’ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಕಾಂಗ್ರೆಸ್‌ ಕಾರ್ಯಕರ್ತರು ಹಿಂಸಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಿದ ಬಗ್ಗೆಯೂ ವರದಿಯಾಗಿದೆ. ಇನ್ನು ಕೆಲವೆಡೆ ಪ್ರಧಾನಿ ಮೋದಿ ಪರ ಘೋಷಣೆ ಕೂಗಿ, ಬಂದ್‌ಗೆ ಬೆಂಬಲಿಸದ ವಿದ್ಯಮಾನಗಳೂ ನಡೆದಿವೆ.

ಪಶ್ಚಿಮ ಬಂಗಾಳದ ಹೌರಾದಲ್ಲಿ ಬಂದ್‌ಗೆ ಬೆಂಬಲ ನೀಡದವರಿಗೆ ರಸಗುಲ್ಲಾ ವಿತರಿಸಿ ಬಿಜೆಪಿ ಕಾರ್ಯಕರ್ತರು ಗಮನ ಸೆಳೆದಿದ್ದಾರೆ. ಬಂದ್‌ಗೆ ಬೆಂಬಲ ನೀಡದೆ, ಅಂಗಡಿ, ಆಟೋ ಸೇರಿದಂತೆ ನಿತ್ಯದ ಕಾಯಕದಲ್ಲಿ ಪಾಲ್ಗೊಂಡವರಿಗೆ ರಸಗುಲ್ಲಾ ತಿನ್ನಿಸಿದ್ದಾರೆ.

2013 ಕ್ಕೆ ಹೋಲಿಸಿದರೆ, ತೈಲ ಬೆಲೆ ಏರಿಕೆಯಾಗಿರುವುದು ಸತ್ಯವೇ. ಆದರೆ ದಿನ ಬಳಕೆ ವಸ್ತುಗಳು, ತರಕಾರಿಗಳ ಬೆಲೆಗಳು ಏರಿಲ್ಲ. ಹೀಗಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ ಎಂದು ಅಂಗಡಿದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸೇರಿದಂತೆ ಅಸ್ಸಾಂ, ಬಿಹಾರ್, ಕೇರಳ, ಒರಿಸ್ಸಾದಲ್ಲಿ ಬಂದ್‌ ಗೆ ಬೆಂಬಲ ವ್ಯಕ್ತವಾಗಿದ್ದರೆ ಉಳಿದ ಭಾಗಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...