alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ, ಮಗುವಿನೊಂದಿಗೆ ಕಟ್ಟಡದ ಮೇಲಿಂದ ಹಾರಿದ ಉದ್ಯಮಿ

ಸೂರತ್ ನ ಬಟ್ಟೆ ವ್ಯಾಪಾರಿಯೊಬ್ಬ ಸಾಲಬಾಧೆ ತಾಳಲಾರದೆ ಪತ್ನಿ ಮತ್ತು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 12 ಮಹಡಿಗಳುಳ್ಳ ಅಪಾರ್ಟ್ಮೆಂಟ್ ನ ಟೆರೆಸ್ ಮೇಲಿಂದ ಮೂವರು ಜಿಗಿದು ಸಾವಿಗೆ ಶರಣಾಗಿದ್ದಾರೆ.

35 ವರ್ಷದ ವಿಜಯ್ ವಘಸಿಯಾ, ಪತ್ನಿ ರೇಖಾ ಹಾಗೂ 4 ವರ್ಷದ ಮಗ ವೀರ್ ಮೃತ ದುರ್ದೈವಿಗಳು. ಇವರು ಮಜೆಸ್ಟಿಕಾ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. 2 ತಿಂಗಳಷ್ಟೆ ಅಲ್ಲಿ ಮನೆ ಖರೀದಿ ಮಾಡಿದ್ದರು. ಬಟ್ಟೆ ವ್ಯಾಪಾರಿಯಾಗಿದ್ದ ವಿಜಯ್, ಕೋ-ಆಪರೇಟಿವ್ ಸೊಸೈಟಿಯೊಂದನ್ನು ಕೂಡ ನಡೆಸುತ್ತಿದ್ದ.

ಬೆಳಗ್ಗೆ ಎಂದಿನಂತೆ ವಿಜಯ್ ವಾಕಿಂಗ್ ಹೊರಟಿದ್ದ. ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರೋ ಸ್ನೇಹಿತ ಗೌರವ್ ಜೊತೆಗೆ ವಾಕಿಂಗ್ ಹೋಗುತ್ತಿದ್ದ ವಿಜಯ್, ನೀರಿನ ಬಾಟಲಿ ಮರೆತು ಬಂದಿರೋದಾಗಿ ಹೇಳಿ ಮನೆಗೆ ಬಂದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಪತ್ನಿ ಮತ್ತು ಮಗನೊಂದಿಗೆ ಕಟ್ಟಡದಿಂದ ಹಾರಿದ್ದಾನೆ.

ವಿಜಯ್ ಜೇಬಿನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ, ತಮ್ಮ ಸಾವಿಗೆ ಯಾರೂ ಕಾರಣರಲ್ಲ. ಮೈತುಂಬಾ ಸಾಲ ಮಾಡಿಕೊಂಡಿದ್ದರಿಂದ ಬೇರೆ ವಿಧಿಯಿಲ್ಲದೇ ಆತ್ಮಹತ್ಯೆ ಮಾಡಿಕೊಳ್ತಿದ್ದೇವೆ. ನನ್ನ ಉದ್ಯಮವನ್ನು ಸಹೋದರ ಮುಂದುವರಿಸುತ್ತಾನೆ ಅಂತಾ ಬರೆದಿಟ್ಟಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...