alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತಂದ ಸಾವು..!

SELFIE DEATHಈಗ ಎಲ್ಲಾ ಕಡೆ ಸೆಲ್ಫಿ ಕ್ರೇಝ್ ಹೆಚ್ಚಾಗಿದೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಈ ಸೆಲ್ಫಿ ಹುಚ್ಚಿಗೆ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇಬ್ಬರು ಸ್ನೇಹಿತರು ತಾಂಡಾದಲ್ಲಿರುವ ಜಲಪಾತ ನೋಡಲು ಹೋಗಿದ್ರು.

ಮಳೆ ಕೂಡ ಜೋರಾಗಿ ಸುರಿಯುತ್ತಿತ್ತು. ಇಬ್ಬರೂ ಜೊತೆಯಾಗಿ ಜಲಪಾತದ ಹಿನ್ನೆಲೆಯಲ್ಲಿ ಸುಂದರ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಜಲಪಾತದ ಅಂಚಿಗೆ ತಲುಪಿದ್ದು ಇಬ್ಬರಿಗೂ ಅರಿವಾಗಿಲ್ಲ, ಫೋಟೋ ತೆಗೆಯುವ ಆತುರದಲ್ಲಿ ಕೆಳಕ್ಕೆ ಬಿದ್ದಿದ್ದಾರೆ. ಸುತ್ತಮುತ್ತ ಇದ್ದವರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ರು. ಸತತ 6 ಗಂಟೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನೂ ಮೇಲಕ್ಕೆ ಕರೆತಂದಿದ್ದಾರೆ. ಆದ್ರೆ ಈ ಅವಘಡದಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಕಳೆದ 2 ತಿಂಗಳಲ್ಲಿ ಮಿರ್ಜಾಪುರದಲ್ಲಿ ಸೆಲ್ಫಿ ಹುಚ್ಚಿಗೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಾದ್ರೂ ಸೆಲ್ಫಿ ತೆಗೆಯುವ ಮುನ್ನ ಎಲ್ಲರೂ ಕೊಂಚ ಎಚ್ಚರದಿಂದಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...