alex Certify
ಕನ್ನಡ ದುನಿಯಾ       Mobile App
       

Kannada Duniya

ಝೀಕಾ ವೈರಸ್ ಗೆ ನಲುಗಿದ ಖ್ಯಾತ ಕಾರ್ಪೋರೆಟ್ ಕಂಪನಿ

zika

ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಮಾರಕ ಝೀಕಾ ವೈರಸ್ ಗೆ ಈಗಾಗಲೇ ಹಲವಾರು ಮಂದಿ ನಲುಗಿದ್ದು, ಇದೀಗ ಪ್ರಮುಖ ಕಾರ್ಪೋರೆಟ್ ಕಂಪನಿಯೊಂದು ಕೂಡ ನಲುಗಿದೆ. ಝೀಕಾ ವೈರಸ್ ನಿಂದ ಹಲವು ರೀತಿಯ ಗಂಭೀರ ಪರಿಣಾಮಗಳು ಉಂಟಾಗುತ್ತವೆ.

ಹೀಗೆ ಗಂಭೀರ ಝೀಕಾ ವೈರಸ್ ಬಗ್ಗೆಯೇ ಎಲ್ಲಾ ಕಡೆಗಳಲ್ಲಿ ಆತಂಕ ಉಂಟಾಗಿದ್ದು, ಟಾಟಾ ಮೋಟಾರ್ಸ್ ಮೇಲೂ ಅದು ಪರಿಣಾಮ ಬೀರಿದೆ. ಟಾಟಾ ಮೋಟಾರ್ಸ್ ನಿಂದ ‘ಜಿಕಾ’ ಹೆಸರಿನಲ್ಲಿ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಈಗಾಗಲೇ ನವದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ನಡೆದ ‘ಆಟೋ ಎಕ್ಸ್ ಪೋ’ನಲ್ಲಿ ಟಾಟಾ ಝೀಕಾ ಕಾರಿನ ಮಾದರಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಅಪಾರ ಮಂದಿಯ ಮೆಚ್ಚುಗೆ, ಕುತೂಹಲಕ್ಕೆ ಕಾರಣವಾಗಿದೆ.

ಟಾಟಾ ಮೋಟಾರ್ಸ್ ಇನ್ನಷ್ಟು ಸುಧಾರಿತ ತಂತ್ರಜ್ಞಾನ ಅಳವಡಿಸಿ ಝೀಕಾ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದ್ದರೂ, ಪ್ರಸ್ತುತ ವಿಶ್ವದಲ್ಲಿ ಝೀಕಾ ವೈರಸ್ ಆತಂಕ ಮೂಡಿಸಿರುವುದರಿಂದ ಹೆಸರು ಬದಲಿಸಲು ಚಿಂತಿಸಿದೆ ಎಂದು ಹೇಳಲಾಗಿದೆ. ‘ಜಿಪ್ಪಿ’ ಮತ್ತು ‘ಕಾರ್’ ಹೆಸರನ್ನು ಸೇರಿಸಿ ಟಾಟಾ ಮೋಟಾರ್ಸ್ ‘ಝೀಕಾ’ ಎಂದು ನೂತನ ಕಾರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವಾಗಲೇ ಮಾರಕ ಝೀಕಾ ವೈರಸ್ ತಲ್ಲಣ ಮೂಡಿಸಿದೆ. ಹಾಗಾಗಿ ಹೆಸರು ಬದಲಿಸಲಾಗುವುದು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...