alex Certify
ಕನ್ನಡ ದುನಿಯಾ       Mobile App
       

Kannada Duniya

ಪಶ್ಚಿಮ ಬಂಗಾಳದಲ್ಲಿ ಆತಂಕ ಹುಟ್ಟಿಸಿದೆ ಮೊಮೋ

ಕೊಲ್ಕೊತ್ತಾ: ಡೆಡ್ಲಿ ಗೇಮ್ ಎಂದು ಕುಖ್ಯಾತಿಯಾಗಿರುವ ಮೊಮೋ ಈಗ ಪಶ್ಚಿಮ ಬಂಗಾಳದಲ್ಲಿ ಆತಂಕ ಹುಟ್ಟುಹಾಕಿದೆ.

ಬ್ಲೂವೇಲ್ ಮಾದರಿ ಮೊಮೊ ಆಟದಿಂದ ಆ ರಾಜ್ಯದಲ್ಲಿ ಆಗಸ್ಟ್ 20 ಮತ್ತು 21ರಂದು ಇಬ್ಬರು ಮೃತಪಟ್ಟಿದ್ದಾರೆಂಬ ಊಹಾಪೋಹ ಹರಿದಾಡಿದೆ. ಆದರೆ ಈ ಸಾವಿಗೆ ಮೊಮೋ ಆಟವೇ ಕಾರಣವೇ ಎಂಬುದನ್ನು ಖಚಿತಪಡಿಸಿಲ್ಲ. ಇಷ್ಟರ ನಡುವೆಯೂ ಎಚ್ಚರಿಕೆ ಸಂದೇಶವನ್ನು ಟ್ವೀಟರ್ ಮೂಲಕ ನೀಡಿದ್ದಾರೆ.

ವಾಟ್ಸಾಪ್ ಸಂದೇಶದ ಮೂಲಕ ಆಟ ಆರಂಭವಾಗಿ ಅಸ್ಪಷ್ಟ ಸಾವಿನಲ್ಲಿ ಕೊನೆಯಾಗುತ್ತಿದೆ ಎಂಬ ಮಾತಿದೆ. ಜಪಾನ್, ಮೆಕ್ಸಿಕೋ, ಕೊಲಂಬಿಯಾದ ಫೋನ್ ಸಂಖ್ಯೆಗಳಿಂದ ನಿರ್ದೇಶನಗಳು ಬರುತ್ತವೆ ಎನ್ನಲಾಗುತ್ತಿದೆ. ಈ ವರ್ಷದ ಸೆಪ್ಟೆಂಬರ್ 25ರಂದು ಅರ್ಜೆಂಟೆನಾದಲ್ಲಿ ಮೊದಲ ಮೊಮೋ ಚಾಲೆಂಜ್ ಸಾವು ಸಂಭವಿಸಿದೆ ಎಂಬ ವರದಿ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...