alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ನಿವಾಸಕ್ಕೆ ಬಂತು ವಿಷಪೂರಿತ ಹಾವು

download-2

ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅದೃಷ್ಟ ಚೆನ್ನಾಗಿತ್ತು. ಸಿಎಂ ಅಧಿಕೃತ ನಿವಾಸಕ್ಕೆ ವಿಷಪೂರಿತ ಹಾವೊಂದು ಬಂದಿತ್ತು. ಸಿಎಂ ನಿವಾಸಕ್ಕೆ ಹಾವು ಬಂದಿದೆ ಎಂಬ ಸುದ್ದಿ ಕೆಲ ಕ್ಷಣ ಗೊಂದಲಕ್ಕೀಡು ಮಾಡಿತ್ತು.

ಬೆಳಿಗ್ಗೆ 9.30ರ ಸುಮಾರಿಗೆ ಸಿಎಂ ಅಧಿಕೃತ ನಿವಾಸದ ಮುಂದಿರುವ ಗಾರ್ಡನ್ ನಲ್ಲಿ ವಿಷಪೂರಿತ ಹಾವು ಕಾಣಿಸಿಕೊಂಡಿದೆ. ತಕ್ಷಣ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಹೊರಗೆ ಬರದಂತೆ ಸಿಎಂಗೆ ಸೂಚನೆ ನೀಡಿದ್ದಾರೆ. ನಂತ್ರ ವನ್ಯಜೀವಿ ಇಲಾಖೆಗೆ ಕರೆ ಮಾಡಿದ್ದಾರೆ.

ತಕ್ಷಣ ಸಿಎಂ ನಿವಾಸಕ್ಕೆ ಬಂದು ಹಾವು ಹಿಡಿಯುವಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸಿಎಂ ನಿವಾಸದ ಮುಂದೆ ಮರ, ಹುಲ್ಲು ಜಾಸ್ತಿ ಇರುವ ಕಾರಣ ಹಾವು ಬಂದಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...