alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಡ್ನಿ ದಾನಕ್ಕೆ ಮುಂದಾದವನ ವಿಚಿತ್ರ ಕಥೆ….

sush

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಹಲವರು ಸುಷ್ಮಾಗೆ ಕಿಡ್ನಿ ಕೊಡಲು ಮುಂದಾಗಿದ್ದಾರೆ.

ಆದ್ರೆ ಕಿಡ್ನಿ ದಾನ ಮಾಡಲು ಮುಂದಾಗಿರೋ ವ್ಯಕ್ತಿಯೊಬ್ಬ ಅದಕ್ಕೆ ಪ್ರತಿಯಾಗಿ ಬದುಕಿದ್ದೇನೆಂಬ ಪ್ರಮಾಣಪತ್ರ ಕೊಡಬೇಕೆಂದು ಮನವಿ ಮಾಡಿದ್ದಾನೆ. ಯಾಕಂದ್ರೆ ದಾಖಲೆಗಳ ಪ್ರಕಾರ ಆತ ಸತ್ತು 10 ವರ್ಷಗಳಾಗಿವೆ.

ವಾರಣಾಸಿ ಮೂಲದ ಸಂತೋಷ್ ಮೂರತ್ ಸಿಂಗ್, ನಟ ನಾನಾ ಪಾಟೇಕರ್ ಮನೆಯಲ್ಲಿ ಅಡುಗೆ ಕೆಲಸ ಮಾಡ್ತಿದ್ದ. 2003ರಲ್ಲಿ ಮಹಾರಾಷ್ಟ್ರದ ದಲಿತ ಮಹಿಳೆಯನ್ನು ಮದುವೆಯಾಗಿದ್ದ ಸಂತೋಷ್ ನನ್ನು ಕುಟುಂಬದವರು ಹತ್ತಿರ ಸೇರಿಸಿರ್ಲಿಲ್ಲ. ಮನೆಯಿಂದ ಆಚೆ ಹಾಕಿದ್ದರು, ಬಳಿಕ ಆತನ ಅಂತ್ಯಸಂಸ್ಕಾರವನ್ನೂ ಮಾಡಿಬಿಟ್ಟಿದ್ದಾರೆ. ಡೆತ್ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದ್ದಾರೆ, 6 ತಿಂಗಳ ಬಳಿಕ ಮರಳಿದ ಸಂತೋಷ್ ಗೆ ಇದನ್ನೆಲ್ಲ ನೋಡಿ ಆಘಾತ ಉಂಟಾಗಿತ್ತು.

ಅಂದಿನಿಂದ ಇಂದಿನವರೆಗೂ ತಾನು ಬದುಕಿದ್ದೇನೆಂಬುದನ್ನು ಸಾಬೀತುಪಡಿಸಲು ಸಂತೋಷ್ ಮಾಡಿದ ಪ್ರಯತ್ನವೆಲ್ಲ ವಿಫಲವಾಗಿದೆ. ಅದಕ್ಕೆ ಬೇಕಾದ ದಾಖಲೆಗಳನ್ನೆಲ್ಲ ಮನೆಯವರು ನಾಶ ಮಾಡಿದ್ದಾರೆ. ಪೊಲೀಸರ ಬಳಿ ಹೋದ್ರೂ ಪ್ರಯೋಜನವಾಗಿಲ್ಲ, ವಕೀಲರು ಹಣ ಕೇಳ್ತಿದ್ದಾರೆ.

ರಾಷ್ಟ್ರಪತಿ, ಪ್ರಧಾನಿ, ಉತ್ತರ ಪ್ರದೇಶ ಸಿಎಂ ಹೀಗೆ ಎಲ್ಲರಿಗೂ ಸಂತೋಷ್ ಮನವಿ ಮಾಡಿದ್ದಾರೆ. ತಾನಿನ್ನೂ ಬದುಕಿದ್ದೇನೆ ಎಂಬುದನ್ನು ಸಾಬೀತು ಮಾಡಲು ಕಳೆದ 4 ವರ್ಷಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ. ಆದ್ರೆ ಯಾರೊಬ್ಬರೂ ಇವರ ಅಳಲು ಆಲಿಸಿಲ್ಲ. ಇದೀಗ ಸುಷ್ಮಾ ಸ್ವರಾಜ್ ಅವರಾದ್ರೂ ತನ್ನ ಸಂಕಟ ಅರ್ಥಮಾಡಿಕೊಂಡು ನೆರವಾಗಬಹುದು ಅನ್ನೋ ನಿರೀಕ್ಷೆಯಲ್ಲಿ ಸಂತೋಷ್ ಇದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...