alex Certify
ಕನ್ನಡ ದುನಿಯಾ       Mobile App
       

Kannada Duniya

ಶವದಿಂದ ಬಂತು ಶಬ್ಧ, ಮುಖದ ಮೇಲೆ ಬೆವರು ನೋಡಿ ಓಡಿದ್ರು ಜನ….

ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋದ ಶವ ಏಕಾಏಕಿ ಎದ್ದು ಕುಳಿತ್ರೆ ಭಯವಾಗೋದು ಸಾಮಾನ್ಯ. ಹರ್ಯಾಣದ ಪಾಣಿಪತ್ ನಲ್ಲಿಯೂ ಇಂಥಹದ್ದೇ ಘಟನೆ ನಡೆದಿದೆ. ಶವದಿಂದ ಶಬ್ಧ ಬಂದಿದೆ. ಮುಖದ ಮೇಲೆ ಬೆವರು ಬಂದಿದೆ. ಇದನ್ನು ನೋಡಿ ಸಂಸ್ಕಾರಕ್ಕೆ ಬಂದವರು ಭಯಗೊಂಡಿದ್ದಾರೆ.

ನಗರದ ಪ್ರಸಿದ್ಧ ಕೈಮಗ್ಗ ಕೈಗಾರಿಕೋದ್ಯಮಿ ಕೃಷ್ಣ ಮಿತ್ತಲ್ ಮೃತಪಟ್ಟಿದ್ದರು. ದೆಹಲಿಯ ಗಂಗಾರಾಮ್ ಆಸ್ಪತ್ರೆ ವೈದ್ಯರು ಮರಣ ಪ್ರಮಾಣ ಪತ್ರವನ್ನು ಸಂಬಂಧಿಕರ ಕೈಗೆ ನೀಡಿದ್ದರು. ಮೃತದೇಹವನ್ನು ಮನೆಗೆ ತಂದು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಅಂತಿಮ ದರ್ಶನದ ನಂತ್ರ ಮೃತದೇಹವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಶವದಿಂದ ಶಬ್ಧ ಬಂದಿದೆ. ಜೊತೆಗೆ ಮುಖದ ಮೇಲೆ ಬೆವರು ಮೂಡಿದೆ. ಇದನ್ನು ನೋಡಿದ ವ್ಯಕ್ತಿ ಸಂಬಂಧಿಕರಿಗೆ ವಿಷ್ಯ ತಿಳಿಸಿದ್ದಾರೆ.

ಇದ್ರಿಂದ ಆಶ್ಚರ್ಯಕ್ಕೊಳಗಾದ ಸಂಬಂಧಿಕರು ಸ್ಥಳೀಯ ಆಸ್ಪತ್ರೆಗೆ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಕೃಷ್ಣ ಮಿತ್ತಲ್ ಜೀವಂತವಾಗಿದ್ದಾರೆಂದು ವರದಿ ನೀಡಿ, ಚಿಕಿತ್ಸೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...