alex Certify
ಕನ್ನಡ ದುನಿಯಾ       Mobile App
       

Kannada Duniya

ಆರು ಗಂಟೆಯಲ್ಲಿ 16 ಲಕ್ಷ ಗಳಿಸ್ತು ಈ ಫೋಟೋ…!

ಸಾಮಾಜಿಕ ಜಾಲತಾಣವನ್ನು ಸಕಾರಾತ್ಮಕವಾಗಿ ಬಳಸಿಕೊಂಡ್ರೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ಈ ಸುದ್ದಿ ಹೇಳುತ್ತದೆ. ಬಾಲಕನೊಬ್ಬ ತಂದೆ ಮೃತ ದೇಹದ ಬಳಿ ನಿಂತಿದ್ದ ಫೋಟೋ ಕೆಲವೇ ಗಂಟೆಗಳಲ್ಲಿ 16 ಲಕ್ಷ ಗಳಿಸಿದೆ.

ಕಳೆದ ಶುಕ್ರವಾರ ಯಾವುದೇ ರಕ್ಷಣೆಯಿಲ್ಲದೆ ವ್ಯಕ್ತಿಯೊಬ್ಬ ಹಗ್ಗ ಬಳಸಿಕೊಂಡು ಚರಂಡಿ ಸ್ವಚ್ಛಗೊಳಿಸಲು ಮುಂದಾಗಿದ್ದ. ಆಯತಪ್ಪಿ ಚರಂಡಿಯೊಳಗೆ ಬಿದ್ದಿದ್ದಾನೆ. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಘಟನೆ ದೆಹಲಿಯಲ್ಲಿ ನಡೆದಿದೆ. ಅನಿಲ್ ಸಾವು ಇಡೀ ಕುಟುಂಬ ಬೀದಿಗೆ ಬರುವಂತೆ ಮಾಡಿದೆ. ಈ ಮಧ್ಯೆ ತಂದೆ ಶವದ ಬಳಿ ನಿಂತಿರುವ ಮಗನ ಫೋಟೋ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೋಟೋ ವೈರಲ್ ಮಾಡಿ ಧನ ಸಹಾಯ ಮಾಡುವಂತೆ ಅಭಿಯಾನ ಶುರು ಮಾಡಲಾಗಿದೆ. ಫೋಟೋ ಅಪ್ಲೋಡ್ ಆದ 6 ಗಂಟೆಯಲ್ಲಿ 16 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿಗಳು ಕೈಲಾದ ಸಹಾಯ ಮಾಡಿದ್ದಾರೆ. 16 ದಿನಗಳಲ್ಲಿ 24 ಲಕ್ಷ ಸಂಗ್ರಹ ಮಾಡುವ ಗುರಿ ಹೊಂದಲಾಗಿತ್ತಂತೆ. ಆದ್ರೆ ಫೋಟೋ ವೈರಲ್ ಆದ ನಾಲ್ಕೇ ಗಂಟೆಯಲ್ಲಿ 10.4 ಲಕ್ಷ ಸಂಗ್ರಹವಾಗಿದೆ. 500 ರೂಪಾಯಿಯಿಂದ ಹಿಡಿದು 15 ರೂಪಾಯಿ, 50 ರೂಪಾಯಿ ಹೀಗೆ ಕೈಲಾದಷ್ಟು ಹಣವನ್ನು ಜನರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...