alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತ್ಯಸಂಸ್ಕಾರದ ವೇಳೆ ಶವದ ಮುಖ ನೋಡಿ ಕಂಗಾಲಾದ್ರು…!

ಉತ್ತರ ಪ್ರದೇಶದ ಆಗ್ರಾದಲ್ಲಿ ಪೋಸ್ಟ್ ಮಾರ್ಟಮ್ ಇಲಾಖೆಯ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಸಿಬ್ಬಂದಿ ಶವವನ್ನು ಅದಲು-ಬದಲು ಮಾಡಿದ್ದಾರೆ. ಶವವನ್ನು ಮನೆಗೆ ತೆಗೆದುಕೊಂಡು ಹೋದ ನಂತ್ರ ಕುಟುಂಬಸ್ಥರಿಗೆ ಶವ ಅದಲು-ಬದಲಾಗಿರುವ ವಿಷಯ ಗೊತ್ತಾಗಿದೆ.

ಘಟನೆ ನಡೆದಿರುವುದು ಎಂ.ಎಂ. ಗೇಟ್ ಪ್ರದೇಶದ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ. ಅಪಘಾತವೊಂದರಲ್ಲಿ ವ್ಯಕ್ತಿ ಸಾವನ್ನಪ್ಪಿದ್ದ. ಶವ ಪರೀಕ್ಷೆ ನಂತ್ರ ಕುಟುಂಬಸ್ಥರು ಶವವನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು. ಅಂತಿಮ ಸಂಸ್ಕಾರದ ವೇಳೆ ಶವದ ಮುಖ ನೋಡಿ ಕಂಗಾಲಾಗಿದ್ದಾರೆ ಕುಟುಂಬಸ್ಥರು.

ಪೋಸ್ಟ್ ಮಾರ್ಟಮ್ ಮಾಡಿದವರ ಬಳಿ ಹೋದ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಸಮಸ್ಯೆ ಬಗೆಹರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...