alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮಾಚಲದಲ್ಲೂ ಶುರುವಾಯ್ತು ಮಾರಣಾಂತಿಕ ವೈರಸ್ ಭಯ

ಹಿಮಾಚಲ ಪ್ರದೇಶದ ಸಿರ್ಮೌರ್ ನ ನಹನ್ ನಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಬಾವಲಿಗಳು ಸತ್ತು ಬಿದ್ದಿದ್ದು, ಆತಂಕ ಮನೆ ಮಾಡಲು ಕಾರಣವಾಗಿದೆ. ಪ್ರೌಢಶಾಲೆಯ ಬಾವಿಯಲ್ಲಿ ಬಾವಲಿಗಳು ಸತ್ತು ಬಿದ್ದಿವೆ. ಅವುಗಳನ್ನು ಪುಣೆ ಹಾಗೂ ಜಲಂಧರ್ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಶೀಘ್ರದಲ್ಲಿಯೇ ಪ್ರಯೋಗಾಲಯಗಳಿಂದ ವರದಿ ಬರಲಿದೆ. ಸೋಂಕು ಹರಡಲು ಸಾಧ್ಯವಿಲ್ಲ. ಭಯಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಶಾಲೆಯ ಆವರಣದ ಬಳಿ ಮರಗಳ ಕೆಳಗೆ ಕೆಲ ಬಾವಲಿಗಳು ಸತ್ತು ಬಿದ್ದಿವೆ. ಪ್ರೌಢಶಾಲೆ ಬಾವಿ, ಆವರಣದಲ್ಲಿ ಬಾವಲಿಗಳು ಸತ್ತು ಬಿದ್ದಿರುವ ಸುದ್ದಿ ಕೇಳ್ತಿದ್ದಂತೆ ಜನರು ಕಂಗಾಲಾಗಿದ್ದಾರೆ.

ಶಾಲಾ ಆಡಳಿತ ಮಂಡಳಿ ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿತ್ತು. ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿ ಸತ್ತ ಬಾವಲಿ ಸ್ಯಾಂಪಲನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸತ್ತ ಬಾವಲಿ ಹಾಗೂ ಪ್ರಾಣಿಗಳಿಂದ ದೂರ ಇರುವಂತೆ ಆರೋಗ್ಯ ಇಲಾಖೆ, ಮಕ್ಕಳು ಹಾಗೂ ಸ್ಥಳೀಯರಿಗೆ ಸೂಚನೆ ನೀಡಿದೆ.

ಕೇರಳದಲ್ಲಿ ಈಗಾಗಲೇ ನಿಫಾ ವೈರಸ್ ಆರ್ಭಟಕ್ಕೆ 11 ಮಂದಿ ಸಾವನ್ನಪ್ಪಿದ್ದಾರೆ. ಅನೇಕರ ರಕ್ತದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...