alex Certify
ಕನ್ನಡ ದುನಿಯಾ       Mobile App
       

Kannada Duniya

ಮಚ್ಚಿನಲ್ಲಿ ಕೇಕ್ ಕತ್ತರಿಸಿದ್ದವನು ಪೊಲೀಸರಿಗೆ ಶರಣು

ಕಳೆದ ವಾರ ಚೆನ್ನೈ ಹೊರ ವಲಯದಲ್ಲಿ ತನ್ನ ಸಂಗಡಿಗರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಕುಖ್ಯಾತ ಭೂಗತ ಪಾತಕಿ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದು, ಇದೀಗ ಶರಣಾಗಿದ್ದಾನೆ.

ಮಂಗಳವಾರದಂದು ಚೆನ್ನೈನ ಅಂಬತ್ತೂರು ಪೊಲೀಸ್ ಠಾಣೆಯಲ್ಲಿ ಬಿನು ಪಾಪಚ್ಚನ್ ಶರಣಾಗಿದ್ದು, ಈತನ ವಿರುದ್ದ ಕೊಲೆ, ಕೊಲೆ ಯತ್ನ ಸೇರಿದಂತೆ 28 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು.

ಮೂಲತಃ ಕೇರಳದವನಾದ ಬಿನು ಚೆನ್ನೈಗೆ ವಲಸೆ ಬಂದಿದ್ದು, ಮೊದಲಿಗೆ ಟೀ ಅಂಗಡಿ ತೆರೆದಿದ್ದ ಈತ ಬಳಿಕ ಭೂಗತ ಲೋಕಕ್ಕೆ ಕಾಲಿಟ್ಟಿದ್ದ. ಕಳೆದ ವಾರ ಚೆನ್ನೈ ಹೊರ ವಲಯದಲ್ಲಿ ಬಿನು ಸಂಗಡಿಗರ ಜೊತೆ ತನ್ನ 47 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದರು.

ಈ ದಾಳಿಯಲ್ಲಿ 75 ಮಂದಿ ಕ್ರಿಮಿನಲ್ ಗಳು 45 ದ್ವಿಚಕ್ರ ವಾಹನ, 7 ಕಾರು, ದುಬಾರಿ ಬೆಲೆಯ ಹಲವು ಮೊಬೈಲ್ ಗಳು ಹಾಗೂ ಮಾರಕ ಆಯುಧಗಳ ಸಮೇತ  ಸಿಕ್ಕಿ ಬಿದ್ದಿದ್ದರು. ಈ ದಾಳಿಯಲ್ಲಿ ಬಿನು ಪರಾರಿಯಾಗಲು ಯಶಸ್ವಿಯಾಗಿದ್ದು, ಇದೀಗ ಪೊಲೀಸರಿಗೆ ಶರಣಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...