alex Certify
ಕನ್ನಡ ದುನಿಯಾ       Mobile App
       

Kannada Duniya

ಮರು ಪರೀಕ್ಷೆಯಲ್ಲಿ ಬಿಹಾರದ ಟಾಪರ್ಸ್ ಫೇಲ್

bihar examಬಿಹಾರದ 12 ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ಸ್ ಆಗಿದ್ದ ಕೆಲವು ವಿದ್ಯಾರ್ಥಿಗಳನ್ನು ಮಾಧ್ಯಮದವರು ಸಂದರ್ಶಿಸಿದ ವೇಳೆ ಸರಳ ಪ್ರಶ್ನೆಗಳಿಗೂ ತಪ್ಪು ಉತ್ತರ ನೀಡಿದ ಕಾರಣ ಪರೀಕ್ಷಾ ಅಕ್ರಮ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ವಿಜ್ಞಾನ ಹಾಗೂ ಕಲಾ ವಿಭಾಗದಲ್ಲಿ ಟಾಪರ್ ಗಳಾಗಿದ್ದ 14 ಮಂದಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಫೇಲ್ ಆಗಿದ್ದರೆ ಮತ್ತೊಬ್ಬ ವಿದ್ಯಾರ್ಥಿನಿ ಪರೀಕ್ಷೆಗೇ ಹಾಜರಾಗಿಲ್ಲ.

ಮಾಧ್ಯಮ ಸಂದರ್ಶನದ ವೇಳೆ ಕಲಾ ವಿಭಾಗದ ಟಾಪರ್ ಆಗಿದ್ದ ರುಬಿ ರಾಯ್, political science ಅನ್ನು “prodigal science” ಎಂದು ಉಚ್ಚರಿಸಿದ್ದಳಲ್ಲದೇ ಅದು ಅಡುಗೆಗೆ ಸಂಬಂಧಪಟ್ಟ ವಿಷಯವೆಂಬ ಉತ್ತರ ನೀಡಿದ್ದಳು. ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿದ್ದ ಸೌರವ್ ಶ್ರೇಷ್ಟ ಎಂಬ ವಿದ್ಯಾರ್ಥಿ, ಪ್ರೋಟಾನ್ ಮತ್ತು ನ್ಯೂಟ್ರಾನ್ ಕುರಿತ ಸರಳ ಪ್ರಶ್ನೆಗೆ ಉತ್ತರ ನೀಡಲು ತಡಬಡಾಯಿಸಿದ್ದ. ಈ ಇಬ್ಬರೂ ವೈಶಾಲಿ ಜಿಲ್ಲೆಯ ವಿಷ್ಣು ರಾಯ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. 12 ನೇ ತರಗತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ವರದಿಗಳು ಭಿತ್ತರವಾದ ಹಿನ್ನಲೆಯಲ್ಲಿ ಬಿಹಾರ ಸರ್ಕಾರ 14 ಮಂದಿ ಟಾಪರ್ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು.

ಕಲಾ ವಿಭಾಗದ ಟಾಪರ್ ರುಬಿ ರಾಯ್ ಪರೀಕ್ಷೆಗೆ ಗೈರು ಹಾಜರಾಗಿದ್ದರೆ, ವಿಜ್ಞಾನ ವಿಭಾಗದ ಟಾಪರ್ ಸೌರವ್ ಶ್ರೇಷ್ಟ ಹಾಗೂ ರಾಹುಲ್ ರಾಜ್ ಎಂಬ ಇಬ್ಬರು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಇವರೆಲ್ಲರೂ ವೈಶಾಲಿಯ ವಿಷ್ಣು ರಾಯ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ರಾಜಕೀಯ ನಾಯಕನೊಬ್ಬನಿಗೆ ಸೇರಿರುವ ಈ ಕಾಲೇಜಿನಲ್ಲಿ ಸಾಮೂಹಿಕ ನಕಲು ಮಾಡಿಸಲಾಗುತ್ತಿತ್ತು ಎಂಬುದು ಈಗ ದೃಢಪಟ್ಟಂತಾಗಿದೆ. ಈ ಹಿನ್ನಲೆಯಲ್ಲಿ ಕಾಲೇಜಿನ ಮಾನ್ಯತೆಯನ್ನು ಅಮಾನತು ಮಾಡಿರುವ ಶಿಕ್ಷಣ ಇಲಾಖೆ, ಷೋಕಾಸ್ ನೋಟೀಸ್ ನೀಡಿದೆ. ಜೊತೆಗೆ ರುಬಿ ರಾಯ್, ಸೌರವ್ ಶ್ರೇಷ್ಟ ಹಾಗೂ ರಾಹುಲ್ ರಾಜ್ ರ ಫಲಿತಾಂಶವನ್ನು ರದ್ದು ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...