alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈನಲ್ಲಿ ಹರಾಜಿಗಿದೆ ದಾವೂದ್ ಗೆ ಸೇರಿದ ಆಸ್ತಿ

ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂಗೆ ಸೇರಿದ ಆಸ್ತಿಯನ್ನು ಮುಂಬೈನಲ್ಲಿ ಹರಾಜು ಹಾಕಲಾಗ್ತಿದೆ. ಹಣಕಾಸು ಇಲಾಖೆ ಅಡಿಯಲ್ಲಿ ಬರುವ SAFEMA ಈ ಹರಾಜು ಪ್ರಕ್ರಿಯೆ ಆಯೋಜಿಸಿದೆ. ಇಂಡಿಯನ್ ಮರ್ಚೆಂಟ್ ಚೇಂಬರ್ಸ್ ನಲ್ಲಿ 10 ಗಂಟೆಯಿಂದ ಹರಾಜು ಆರಂಭವಾಗ್ತಿದೆ.

ಇ-ಆಕ್ಷನ್ ಹಾಗೂ ಸಾರ್ವಜನಿಕ ಬಿಕರಿ ಎರಡೂ ರೀತಿಯ ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆ. ದಾವೂದ್ ಇಬ್ರಾಹಿಂಗೆ ಸೇರಿದ ರೋನಕ್ ಅಫ್ರೋಜ್ ರೆಸ್ಟೋರೆಂಟ್, ದಮರ್ವಲಾ ಬಿಲ್ಡಿಂಗ್ ಮತ್ತು ಶಬನಮ್ ಗೆಸ್ಟ್ ಹೌಸ್ ಹರಾಜಿಗಿದೆ. ಎರಡು ಮಹಡಿಯ ಶಬನಮ್ ಗೆಸ್ಟ್ ಹೌಸ್ ಭೆಂಡಿ ಬಜಾರ್ ನಲ್ಲಿದೆ.

ದಾವೂದ್ ತನ್ನ ಮೊದಲ ಪತ್ನಿ ಮೆಜಬೀನ್ ಹೆಸರಲ್ಲಿ ಈ ಕಟ್ಟಡವನ್ನು ಕೊಂಡುಕೊಂಡಿದ್ದ. ಇದಕ್ಕೆ 12,343,000 ರೂ. ಬೆಲೆ ನಿಗದಿ ಮಾಡಲಾಗಿದೆ. 80ರ ದಶಕದಲ್ಲಿ ದಮರ್ವಲಾ ಕಟ್ಟಡದಲ್ಲಿ ದಾವೂದ್ ಕುಟುಂಬ ನೆಲೆಸಿತ್ತು. ಡಿ ಗ್ಯಾಂಗ್ ಸದಸ್ಯರು ಹಾಗೂ ದಾವೂದ್ ಬಲಗೈ ಬಂಟನಾಗಿದ್ದ ಕಸ್ಕರ್ ಕೂಡ ಇಲ್ಲೇ ತಂಗಿದ್ದ.

ಈ ಕಟ್ಟಡಕ್ಕೆ 15,576,000 ರೂಪಾಯಿ ನಿಗದಿಪಡಿಸಲಾಗಿದೆ. ರೋನಕ್ ಅಫ್ರೋಜ್ ರೆಸ್ಟೋರೆಂಟ್ ಅನ್ನು 2015ರಲ್ಲೇ ಎಸ್. ಬಾಲಕೃಷ್ಣನ್ ಎಂಬ ಪತ್ರಕರ್ತ ಖರೀದಿಗೆ ಮುಂದಾಗಿದ್ದರು. ಆದ್ರೆ ಬಿಡ್ ಮೊತ್ತ 4.28 ಕೋಟಿ ರೂ. ಸಂಗ್ರಹಿಸಲು ಸಾಧ್ಯವಾಗಿರಲಿಲ್ಲ. ಈಗ ಅದಕ್ಕೆ 1.18 ಕೋಟಿ ರೂ. ನಿಗದಿ ಮಾಡಿದ್ದು, ಹರಾಜಿನಿಂದ ಹಿಂದೆ ಸರಿಯುವಂತೆ ಬಾಲಕೃಷ್ಣನ್ ಗೆ ಬೆದರಿಕೆಗಳು ಕೂಡ ಬಂದಿವೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...