alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಮಂತ ಮಹಿಳೆಯರನ್ನು ಸುಲಿಗೆ ಮಾಡಲು ದಾವೂದ್ ಸ್ಕೆಚ್

ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ಭೂಗತ ಜಗತ್ತಿನ ನಿಯಮಗಳಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ. ಜಗತ್ತಿನ ಶ್ರೀಮಂತ ಹಾಗೂ ಜನಪ್ರಿಯ ಮಹಿಳಾ ಉದ್ಯಮಿಗಳನ್ನು ಟಾರ್ಗೆಟ್ ಮಾಡಲು ಮಹಿಳೆಯರ ಗುಂಪೊಂದನ್ನು ಕಟ್ಟಿಕೊಂಡಿದ್ದಾನೆ.

ಶ್ರೀಮಂತ ಮಹಿಳೆಯರಿಂದ ಹಣ ಸುಲಿಗೆ ಮಾಡಲೆಂದೇ ಸ್ತ್ರೀ ಗ್ಯಾಂಗನ್ನು ರಚಿಸಿದ್ದಾನೆ. ಯಾರ್ಯಾರನ್ನು ಟಾರ್ಗೆಟ್ ಮಾಡಿರ್ತಾನೋ ಅವರ ಹಣಕಾಸು ಸ್ಥಿತಿ ಹೇಗಿದೆ ಅನ್ನೋದನ್ನು ಈ ಗ್ಯಾಂಗ್ ದಾವೂದ್ ಗೆ ತಿಳಿಸುತ್ತದೆ. ದಾವೂದ್ ನ ಬಲಗೈ ಬಂಟ ಚೋಟಾ ಶಕೀಲ್ ತನ್ನ ಆಪ್ತನಾದ ಉಸ್ಮಾನ್ ಗೆ ಈ ಗ್ಯಾಂಗ್ ನ ಜವಾಬ್ಧಾರಿ ಹೊರಿಸಿದ್ದಾನೆ.

ಕ್ವೀನ್, ಬೇಗಂ ಅಂತೆಲ್ಲಾ ಕೋಡ್ ವರ್ಡ್ ಬಳಸಿ ಡಿ ಗ್ಯಾಂಗ್ ಸದಸ್ಯೆಯರು ಫೋನ್ ಸಂಭಾಷಣೆ ನಡೆಸಿರೋದು ಬಹಿರಂಗವಾಗಿದೆ. ಪಾತಕ ಲೋಕದ ಬ್ಯುಸಿನೆಸ್ ಬಚಾವ್ ಮಾಡಲು ದಾವೂದ್ ಕಸರತ್ತು ಮಾಡ್ತಿದ್ದಾನೆ ಅನ್ನೋದಕ್ಕೆ ಇದೇ ಸಾಕ್ಷಿ. ಇತ್ತೀಚೆಗಷ್ಟೆ ಮಹಿಳೆಯೊಬ್ರು ಈ ಗ್ಯಾಂಗ್ ವಿರುದ್ಧ ದೂರು ನೀಡಿದ್ದರು.

ಆಕೆಗೆ ಕರೆ ಮಾಡಿದ ದಾವೂದ್ ನ ಮಹಿಳಾ ಗ್ಯಾಂಗ್ 1 ಕೋಟಿ ರೂಪಾಯಿ ಕೊಡುವಂತೆ ಬೆದರಿಕೆ ಹಾಕಿತ್ತಂತೆ. ಪಾಕಿಸ್ತಾನದಿಂದ ಆಕೆಗೆ ಹತ್ತಾರು ಫೋನ್ ಕರೆಗಳು ಕೂಡ ಬಂದಿದ್ದವು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ದಾವೂದ್ ನ ಮಹಿಳಾ ಗ್ಯಾಂಗ್ ಅನ್ನು ಪತ್ತೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...