alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ವರುಣ್ ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದ್ದ ದಾವೂದ್ ಶೂಟರ್

ಅಬುದಾಬಿಯಲ್ಲಿ ಭೂಗದ ಪಾತಕಿ ದಾವೂದ್ ಇಬ್ರಾಹಿಂ ಶಾರ್ಪ್ ಶೂಟರ್ ರಶೀದ್ ಮಲ್ಬಾರಿಯನ್ನು ಬಂಧಿಸಲಾಗಿದೆ. ರಶೀದ್ ವಿಚಾರಣೆ ವೇಳೆ ಅನೇಕ ಆಘಾತಕಾರಿ ವಿಷ್ಯಗಳು ಬಹಿರಂಗವಾಗಿದೆ. ರಶೀದ್ ಛೋಟಾ ಶಕೀಲ್ ಆಣತಿಯಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಬಿಜೆಪಿ ನಾಯಕ ವರುಣ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದನಂತೆ.

ಯೋಜನೆ ಫಲ ನೀಡುವ ಮೊದಲೇ ಪೊಲೀಸರ ಕೈಗೆ ಶೂಟರ್ ಸಿಕ್ಕಿ ಬಿದ್ದಿದ್ದಾನೆ. 2014ರಲ್ಲಿ ರಶೀದ್ ನೇಪಾಳ ಮಾರ್ಗದ ಮೂಲಕ ಭಾರತದಿಂದ ಪರಾರಿಯಾಗಿದ್ದ. ಛೋಟಾ ಶಕೀಲನ ಆಪ್ತ ರಶೀದ್. ನೇಪಾಳ ಭೂಗತ ಲೋಕದ ದೊರೆ ರಶೀದ್ ಎಂದ್ರೆ ತಪ್ಪಾಗಲಾರದು. ಬ್ಯಾಂಕಾಕ್ ನಲ್ಲಿ 2000 ರಲ್ಲಿ ನಡೆದ ಛೋಟಾ ರಾಜನ್ ಮೇಲಿನ ದಾಳಿಯಲ್ಲಿ ರಶೀದ್ ಕೂಡ ಕೈ ಜೋಡಿಸಿದ್ದ.

ಕಳೆದ ಕೆಲ ವರ್ಷಗಳಿಂದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಂಟರ ಬಂಧನ ನಡೆಯುತ್ತಿದೆ.ಇದಕ್ಕೂ ಮುನ್ನ ರಶೀದ್ ಸಹೋದರ ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಇದ್ರಲ್ಲಿ ಫಾರೂಕ್ ಹೆಸ್ರು ಪ್ರಮುಖವಾದದ್ದು. ಆತನನ್ನು ದುಬೈನಲ್ಲಿ ಬಂಧಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...