alex Certify
ಕನ್ನಡ ದುನಿಯಾ       Mobile App
       

Kannada Duniya

53ರ ಅಮ್ಮನಿಗೆ ಎರಡನೇ ಮದುವೆ ಮಾಡಿಸಿದ ಮಗಳು

ಜೈಪುರದ ಯುವತಿಯೊಬ್ಬಳು ಎಲ್ಲರಿಗೂ ಮಾದರಿಯಾಗಿದ್ದಾಳೆ. ಒಂಟಿ ಜೀವನ ನಡೆಸುತ್ತಿದ್ದ ವಿಧವೆ ತಾಯಿಗೆ ಇನ್ನೊಂದು ಮದುವೆ ಮಾಡಿ ಭೇಷ್ ಎನ್ನಿಸಿಕೊಂಡಿದ್ದಾಳೆ.

ಸಂಹಿತಾ ತಂದೆ 2016ರಲ್ಲಿ ನಿಧನರಾಗಿದ್ದಾರೆ. ಪತಿ ನಿಧನದ ನಂತ್ರ ಪತ್ನಿ ಗೀತಾ ತುಂಬಾ ಆಘಾತಕ್ಕೊಳಗಾಗಿದ್ದರು. ಸಂಹಿತಾಗೆ ಕೆಲಸ ಸಿಕ್ಕಿದ್ದರಿಂದ ಆಕೆ ಗುರ್ಗಾಂವ್ ಗೆ ಬರುವ ಅನಿವಾರ್ಯತೆ ಎದುರಾಯ್ತು. ಶಾಲಾ ಶಿಕ್ಷಕಿಯಾಗಿರುವ 53 ವರ್ಷದ ಗೀತಾ ಒಂಟಿಯಾಗಿ ಜೀವನ ನಡೆಸುವ ಪರಿಸ್ಥಿತಿ ಬಂತು.

ತಾಯಿ ನೋವನ್ನು ಅರಿತ ಸಂಹಿತಾ ತಾಯಿಗೆ ಇನ್ನೊಂದು ಮದುವೆ ಮಾಡಿಸಿದ್ದಾಳೆ. 2017ರಲ್ಲಿ ತಾಯಿ ಒಪ್ಪಿಗೆ ಇಲ್ಲದೆ ಸಂಹಿತಾ ಮೆಟ್ರಿಮೋನಿಯಾದಲ್ಲಿ ಅಕೌಂಟ್ ಓಪನ್ ಮಾಡಿದ್ದಳಂತೆ. ಇದಕ್ಕೆ ತಾಯಿ ವಿರೋಧ ವ್ಯಕ್ತಪಡಿಸಿದ್ದಳಂತೆ. ಪುನರ್ ವಿವಾಹ ಅವರ ಕುಟುಂಬಸ್ಥರಿಗೂ ಇಷ್ಟವಿರಲಿಲ್ಲವಂತೆ. ಆದ್ರೆ ಹಠ ಬಿಡದ ಸಂಹಿತಾ ತನ್ನ ಕೆಲಸ ಮುಂದುವರೆಸಿದ್ದಳಂತೆ. 2017 ಅಕ್ಟೋಬರ್ ನಲ್ಲಿ 55 ವರ್ಷದ ಕೃಷ್ಣ ಗೋಪಾಲ್ ಗುಪ್ತಾ ಗೀತಾ ಮದುವೆಯಾಗಲು ಮುಂದೆ ಬಂದಿದ್ದರಂತೆ.

ಕೃಷ್ಣ ಗೋಪಾಲ್ ಗುಪ್ತಾ ರೆವೆನ್ಯೂ ಇನ್ಸ್ಪೆಕ್ಟರ್ ಆಗಿದ್ದು 2010ರಲ್ಲಿಯೇ ಪತ್ನಿ ಕಳೆದುಕೊಂಡಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿವೆ. ಸ್ನೇಹಿತರ ಒತ್ತಾಯದ ಮೇರೆಗೆ ಮೆಟ್ರಿಮೋನಿಯಾದಲ್ಲಿ ಅಕೌಂಟ್ ತೆರೆದಿದ್ದರಂತೆ. ನವೆಂಬರ್ ನಲ್ಲಿ ಗೀತಾಳಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಈ ವೇಳೆ ಸತತ ಮೂರು ದಿನ ಗೀತಾ ಜೊತೆಗಿದ್ದರಂತೆ ಕೃಷ್ಣ ಗೋಪಾಲ್ ಗುಪ್ತಾ. ಈ ಸಮಯದಲ್ಲಿ ಇಬ್ಬರು ಆಪ್ತರಾಗಿದ್ದಾರೆ. ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...