alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಸೆ ಮಾಡಿದ ಕೆಲಸ ನೋಡಿ ದಂಗಾದ್ರು ಮನೆ ಮಂದಿ..!

wife

ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಸೊಸೆಯೊಬ್ಬಳು ಊರಿನ ಜನರ ಚರ್ಚಾ ವಿಷಯವಾಗಿದ್ದಾಳೆ. ಗಂಡನ ಮನೆಯವರಿಗೆ ನಂಬಲಸಾಧ್ಯವಾದ ಕೆಲಸ ಮಾಡಿದ್ದಾಳೆ. ಆಕೆಗಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.

ಶಾಮ್ಲಿಯ ಸಾದರ್ ಕೊತ್ವಾಲಿ ಪ್ರದೇಶದ ಲಾಕ್ ಎಂಬ ಊರಿನ ಮೋನು ಎಂಬಾತನ ಮದುವೆ ಜನವರಿಯಲ್ಲಿ ಅಮೃತಾ ಎಂಬಾಕೆ ಜೊತೆ ನಡೆದಿತ್ತು. ಅದ್ಧೂರಿಯಾಗಿ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದರು ಓಂ ಪ್ರಕಾಶ್. ಎರಡು ದಿನದ ಹಿಂದೆ ಮನೆಯಲ್ಲಿ ಪತಿ ಮೋನು, ಆತನ ಸಹೋದರ ಹಾಗೂ ಅಮೃತಾ ಮಾತ್ರ ಇದ್ದರು.

ರಾತ್ರಿ ಊಟಕ್ಕೆ ನಿದ್ದೆ ಮಾತ್ರೆ ಹಾಕಿದ್ದಾಳೆ ಅಮೃತಾ. ಮಲಗಿದ ಅಣ್ಣ-ತಮ್ಮ ಸೂರ್ಯ ನೆತ್ತಿಗೆ ಬಂದ್ರೂ ಏಳಲಿಲ್ಲ. ನೆರೆಯವರು ನೋಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆಯ ಉಳಿದ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಮನೆ ಸದಸ್ಯರು ಅಲ್ಲಿಗೆ ಬಂದಾಗ ಅಮೃತಾ ಇಲ್ಲದ ವಿಚಾರ ಗೊತ್ತಾಗಿದೆ. ಜೊತೆಗೆ ಮನೆಯ ಖಜಾನೆ ಕೂಡ ಖಾಲಿಯಾಗಿದೆ. ಸೊಸೆ ಹೆಸರಿನಲ್ಲಿ ಬಂದ ಅಮೃತಾ ತಾನು ಓಡಿ ಹೋಗುವುದಲ್ಲದೇ ಇಡೀ ಮನೆಯ ಲಕ್ಷ್ಮಿಯನ್ನೂ ದೋಚಿಕೊಂಡು ಹೋಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...