alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರ ಗಮನ ಸೆಳೆದಿದೆ ಫೇಸ್ ಬುಕ್ ನಲ್ಲಿ ಹರಿದಾಡ್ತಿರೋ ಈ ಚಿತ್ರ

ಸೌಂದರ್ಯಕ್ಕೆ ನೀಡಿರುವ ವ್ಯಾಖ್ಯಾನಕ್ಕೆ ಸೆಡ್ಡು ಹೊಡೆದಂತಿರುವ ಡಾರ್ಕ್ ಆಂಡ್ ಲಲ್ವೀ ಎಂಬ ಫೋಟೋ ಹಾಗೂ ಅದರ ಚಿತ್ರ ಇದೀಗ ಬಹಳ ವೈರಲ್ ಆಗಿದೆ. ಕಳೆದೆರಡು ದಿನಗಳಿಂದ ಫೇಸ್ ಬುಕ್ ನಲ್ಲಿ ಇದರದ್ದೇ ಹವಾ.

ಸೌಂದರ್ಯವೆನ್ನುವುದು ಬಣ್ಣದಲ್ಲಿಲ್ಲ, ನೋಡುವ ಕಣ್ಣುಗಳಲ್ಲಿದೆ. ಆದರೆ ಬಣ್ಣದಲ್ಲೇ ಸೌಂದರ್ಯ ಎಂಬುದನ್ನು ಜಗತ್ತಿಗೆ ನಂಬಿಸುತ್ತಿರುವ ಸೌಂದರ್ಯ ಸಾಧನಗಳ ಕಂಪನಿಗಳ ಜಾಹೀರಾತುಗಳಿಗೆ ಸವಾಲು ಹಾಕುವಂತಿದೆ ಇದು.

ಪಾಕಿಸ್ತಾನ ಮೂಲದ ಪೋಟೋಗ್ರಾಫರ್ ಕೆನಡಾ ನಿವಾಸಿ ಝೈನಾಬ್ ಅನ್ವರ್ ಎಂಬವರು ಮಹಿಳೆಯೊಬ್ಬಳು ತನ್ನ ಅರ್ಧ ಮುಖವನ್ನು ಡಾರ್ಕ್ ಲಲ್ವೀ ಎಂಬ ಡಾರ್ಕ್ ನೆಸ್ ಕ್ರೀಂ ಮುಚ್ಚಿರುವ ಫೋಟೋ ತಗೆದು ಇನ್ ಸ್ಟಾಂಗ್ರಾಂ ನಲ್ಲಿ ಹರಿಯಬಿಟ್ಟಿದ್ದರು. ಇದರಿಂದ ಪ್ರೇರಣೆಗೊಂಡ ಬಾಂಗ್ಲಾದೇಶ ಮೂಲದ ಕಲಾವಿದೆ ವಸೀಕಾ ನಹರ್ ಇದರ ಚಿತ್ರವನ್ನೂ ಬಿಡಿಸಿದ್ದು ಎಲ್ಲರ ಮನ ಗೆದ್ದಿದೆ.

ಈ ಬಗ್ಗೆ ಖಾಸಗಿ ವೆಬ್ ಸೈಟ್ ಜೊತೆ ಮಾತನಾಡಿದ ಆಕೆ ಈ ಮೂಲಕವಾದರೂ ಸೌಂದರ್ಯದ ಬಗ್ಗೆ ಜಗತ್ತಿನಲ್ಲಿ ಇರುವ ತಪ್ಪುತಿಳುವಳಿಕೆಯನ್ನು ಬದಲಾಯಿಸೋಣ. ಜಾಹೀರಾತುಗಳೂ ಇನ್ನು ಮುಂದೆ ಜನರ ದಾರಿ ತಪ್ಪಿಸದಿರಲಿ ಎಂದು ಹೇಳಿದ್ದಾಳೆ. ಆಕೆಯ ಪ್ರಯತ್ನಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದ್ದು ಶಹಬ್ಬಾಸ್ ಎಂಬ ಉದ್ಘಾರ ಕೇಳಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...