alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನರ್ಸ್ ಕರ್ತವ್ಯನಿಷ್ಟೆಗೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಕೆಲವೊಬ್ಬರಿರ್ತಾರೆ. ಎಷ್ಟೇ ಅಡ್ಡಿ ಆತಂಕ ಬಂದರೂ ತಾವಂದುಕೊಂಡಿದ್ದನ್ನು ಮಾಡಿಯೇ ತೀರುತ್ತಾರೆ. ಅಂಥವರಲ್ಲೊಬ್ಬರು ಸುನೀತಾ. ಈಕೆ ಜೀವವನ್ನೇ ಪಣಕ್ಕಿಟ್ಟು ತನ್ನ ಕರ್ತವ್ಯ ನಿರ್ವಹಿಸುತ್ತಿರುವವರು.

ಹೌದು, ಸುನೀತಾ ಠಾಕೂರ್ ವೃತ್ತಿಯಲ್ಲಿ ನರ್ಸ್.  ಛತ್ತೀಸ್ ಗಢದ ಹಳ್ಳಿಯೊಂದರಲ್ಲಿ ಈಕೆ ಸೇವೆ ಮಾಡುತ್ತಿದ್ದಾರೆ. ಆದರೆ ಆ ಹಳ್ಳಿಗೆ ಹೋಗಬೇಕೆಂದರೆ ಸುಮಾರು 10 ಕಿಮೀ ನದಿಯಲ್ಲಿ ಪ್ರಯಾಣಿಸಬೇಕು. ಇಂದ್ರಾವತಿ ನದಿ….ಭಯಂಕರ ಮೊಸಳೆಗಳಿರುವ ನದಿ. ಆದರೆ ಕರ್ತವ್ಯವೇ ದೇವರೆಂದು ತಿಳಿದಿರುವ ಈ ಹೆಣ್ಣುಮಗಳು ಮೊಸಳೆಗಳಿಗೆ ಯಾವತ್ತೂ ಭಯಪಟ್ಟಿಲ್ಲ. ಕೆಲವೊಮ್ಮೆ ನಾವಿಕ ಇಲ್ಲದಿರುವಾಗ ತಾವೇ ದೋಣಿಯನ್ನು ನಡೆಸಿಕೊಂಡು ಹೋಗಿದ್ದೂ ಇದೆ. ಮತ್ತೊಬ್ಬಳು ಸ್ನೇಹಿತೆ ಸುನೀತಾ ರಿಗೆ ಸಾಥ್ ನೀಡಿದ್ದಾರೆ.

ಆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಹಳ್ಳಿಗೆ ಇವರು ಹೋದರೆ ಮಾತ್ರ ಔಷಧ ಭಾಗ್ಯ. ಹೀಗಾಗಿ ಸುನೀತಾ ಆ ಜನರಿಗೆ ಔಷಧಗಳನ್ನು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...