alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ಡಬ್ಬು ಅಂಕಲ್ ತದ್ರೂಪಿಯ ಡಾನ್ಸ್ ವಿಡಿಯೋ

ಡಾನ್ಸಿಂಗ್ ಅಂಕಲ್ ಸಂಜೀವ್ ಶ್ರೀವಾತ್ಸವ್ ಯಾರಿಗೇ ತಾನೆ ಗೊತ್ತಿಲ್ಲ. ಬಾಲಿವುಡ್ ನಟ ಗೋವಿಂದ ಅವರ ’ಆಪ್ ಕೆ ಆಜಾನೆ ಸೇ’ ಹಾಡಿಗೆ ನೃತ್ಯಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಪ್ರಸಿದ್ದಿ ಪಡೆದವರು.

ಡಬ್ಬು ಅಂಕಲ್ ಸಂಜೀವ್ ಶ್ರೀವಾತ್ಸವ್ ಅವರನ್ನು ಅನುಸರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಹಲವಾರು ವಿಡಿಯೋಗಳು ಬಂದವು. ಆದರೆ ಅದಾವುದೂ ಅಷ್ಟು ಜನಪ್ರಿಯವೆನಿಸಿಲ್ಲ.

ಆದರೀಗ ಥೇಟ್ ಡಬ್ಬು ಅಂಕಲ್ ರನ್ನೇ ಹೋಲುವಂತಹ ಸಂಜಯ್ ಕಟ್ವಾನಿ ಎಂಬವರು ಅದೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೇವಲ ನೋಡಲು ಮಾತ್ರವಲ್ಲ, ಡಾನ್ಸಿಂಗ್ ಅಂಕಲ್ ರದ್ದೇ ಹಾವ-ಭಾವ, ಡಾನ್ಸ್ ಸ್ಟೆಪ್ಸ್ ಗಳನ್ನೂ ಚಾಚೂ ತಪ್ಪದೇ ಕಾಪಿ ಮಾಡಿರುವ ಸಂಜಯ್ ಕಟ್ವಾನಿ ಅವರ ನೃತ್ಯ ನಿಜಕ್ಕೂ ಅಚ್ಚರಿಗೊಳಿಸುತ್ತದೆ. ಸಂಜಯ್ ಕಟ್ವಾನಿ ಅವರ ಈ ನೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಸೆನ್ಸೆಶನ್ ಕ್ರಿಯೇಟ್ ಮಾಡುವುದರಲ್ಲಿ ಸಂಶಯವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...